alex Certify ಪಿಎಫ್‌ ಖಾತೆದಾರರಿಗೆ ಮೋದಿ ಸರ್ಕಾರದ ಬಂಪರ್‌ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಫ್‌ ಖಾತೆದಾರರಿಗೆ ಮೋದಿ ಸರ್ಕಾರದ ಬಂಪರ್‌ ಉಡುಗೊರೆ

ದೇಶಾದ್ಯಂತ ಇರುವ ಆರು ಕೋಟಿಯಷ್ಟು ಇಪಿಎಫ್ ಚಂದಾದಾರರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೊಡ್ಡ ಧಮಾಕಾ ಘೋಷಿಸಿದೆ.

2019-20 ಸಾಲಿನ ಬಡ್ಡಿಗಾಗಿ ಕಾಯುತ್ತಿದ್ದ ಇಪಿಎಫ್‌ ಖಾತೆದಾರರಿಗೆ ಇಪಿಎಫ್‌ಒ ಬಡ್ಡಿಯನ್ನು ಜಮಾ ಮಾಡಲು ಆರಂಭಿಸಿದೆ. ಡಿಸೆಂಬರ್‌ 31ರಿಂದ ಪಿಎಫ್ ಚಂದಾದಾರರ ಖಾತೆಗಳಿಗೆ 8.5%ದಷ್ಟು ಬಡ್ಡಿ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೂಷ್ ಗಂಗ್ವಾರ್‌ ತಿಳಿಸಿದ್ದಾರೆ. ಇಂದಿನಿಂದಲೇ ಈ ಅನುಕೂಲಗಳು ಸಂಬಂಧಪಟ್ಟ ಮಂದಿಗೆ ದೊರಕಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಇಪಿಎಫ್‌ಓ ಚಂದಾದಾರರು ತಂತಮ್ಮ ಮನೆಗಳಲ್ಲೇ ಕುಳಿತುಕೊಂಡು ತಮ್ಮ ಖಾತೆಗಳಿಗೆ ಈ ಬಡ್ಡಿ ದುಡ್ಡು ಸಂದಾಯವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದಾಗಿದೆ. ಎಸ್‌ಎಂಎಸ್, ಆನ್ಲೈನ್ ಹಾಗೂ ಉಮಾಂಗ್ ಕಿರು ತಂತ್ರಾಶಗಳಲ್ಲದೇ ಇಪಿಎಫ್‌ಓ ಸಹಾಯವಾಣಿಗೆ ಮಿಸ್ ಕಾಲ್ ಕೊಡುವ ಮೂಲಕ ಈ ವಿಷಯದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...