ದಸರಾ ಸಂಭ್ರಮಾಚರಣೆಯ ಕೊನೆಯ ಭಾಗವಾಗಿ ರಾವಣನ ಪ್ರತಿಕೃತಿ ದಹನದ ಅನೇಕ ಕಾರ್ಯಕ್ರಮಗಳನ್ನು ನಾವೆಲ್ಲಾ ನೋಡಿಕೊಂಡೇ ಬೆಳೆದಿದ್ದೇವೆ. ಇಲ್ಲೊಬ್ಬ ಪುಟಾಣಿ ಬೆಂಕಿಕಡ್ಡಿಗಳನ್ನು ಬಳಸಿಕೊಂಡು ರಾವಣನ ಮಿನಿ ಪ್ರತಿಕೃತಿ ನಿರ್ಮಿಸಿದ್ದಾನೆ.
ಅಸ್ಸಾಂನ ಮಿಂಟಿ ರಾಣಿ ದಾಸ್ ಎಂಬಾಕೆ ಪುತ್ರ ಈ ಕಲಾಕೃತಿ ರಚಿಸಿದ್ದಾನೆ. “ರಾವಣನ ಪ್ರತಿಕೃತಿ ಮಾಡಿಕೊಡಲು ನನ್ನ ಮಗ ನನಗೆ ಇಂದು ಕೇಳಿದ. ಸಂಪನ್ಮೂಗಳು ಹೆಚ್ಚು ಇಲ್ಲದ ಕಾರಣ ಈ ಬಾರಿ ರಾವಣನ ದೊಡ್ಡ ಪ್ರತಿಕೃತಿ ಮಾಡಲು ಸಾಧ್ಯವಿಲ್ಲ ಎಂದು ನಾನು ಆತನಿಗೆ ತಿಳಿಸಿದೆ,” ಎಂದಿದ್ದಾರೆ. ಇದಾದ ಕೆಲವು ಕ್ಷಣಗಳ ಬಳಿಕ ಅವರ ಮುದ್ದಿನ ಮಗ ಬೆಂಕಿಕಡ್ಡಿಗಳನ್ನು ಬಳಸಿ ಮಾಡಿದ ರಾವಣನ ಈ ಪ್ರತಿಕೃತಿಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ ಮಿಂಟಿ.
ಬೆಂಕಿಕಡ್ಡಿಗಳನ್ನು ಅಂಟಿನ ಸಹಾಯದಿಂದ ಅಂಟಿಸಿ ರಚಿಸಲಾದ ಈ ರಾವಣನ ಪ್ರತಿಕೃತಿಯನ್ನು ಅರುಜ್ಜಲ್ ಭಾವರ್ನಾವ್ ಹಾಗೂ ಆತನ ಅಪ್ಪ-ಅಮ್ಮ ಸೇರಿಕೊಂಡು ಭಾನುವಾರ ಸಂಜೆಯ ವೇಳೆ ದಹಿಸಿದ್ದಾರೆ.
ದಸರಾದ ಸುಸಂದರ್ಭದಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.