alex Certify ಹಸಿವು ತಾಳಲಾರದೆ ‘ಶ್ರಮಿಕ್’ ರೈಲು ಪ್ರಯಾಣಿಕರು ಮಾಡಿದ್ದಾರೆ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿವು ತಾಳಲಾರದೆ ‘ಶ್ರಮಿಕ್’ ರೈಲು ಪ್ರಯಾಣಿಕರು ಮಾಡಿದ್ದಾರೆ ಈ ಕೆಲಸ

ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿದ ಪರಿಣಾಮ ಕೆಲಸವಿಲ್ಲದೆ ಅತಂತ್ರವಾಗಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದರು. ಹೀಗಾಗಿ ‘ಶ್ರಮಿಕ್’ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತೆರಳುತ್ತಿದ್ದಾರೆ.

ಶನಿವಾರ ಮುಂಬೈನ ಕಲ್ಯಾಣ್ ನಿಂದ ಹೊರಟಿದ್ದ ಶ್ರಮಿಕ್ ರೈಲಿನ ಪ್ರಯಾಣಿಕರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ವಲಸೆ ಕಾರ್ಮಿಕರು ಹಸಿವಿನಿಂದ ಕಂಗೆಟ್ಟು ಹೋಗಿದ್ದರು.

ಸೋಮವಾರ ಬೆಳಿಗ್ಗೆ ಈ ರೈಲು ಮಧ್ಯಪ್ರದೇಶದ ಇಟಾರ್ಸಿ ನಿಲ್ದಾಣಕ್ಕೆ ಬಂದಿದ್ದು, ಈ ವೇಳೆ ಫ್ಲಾಟ್ ಫಾರಂ ಮೇಲೆ ಆಹಾರ ಸಾಮಗ್ರಿಗಳನ್ನು ತಳ್ಳುಗಾಡಿಯಲ್ಲಿ ಇರಿಸಿರುವುದು ಇವರುಗಳಿಗೆ ಕಂಡುಬಂದಿದೆ. ಕೂಡಲೇ ಅದಕ್ಕೆ ಮುಗಿಬಿದ್ದ ಪ್ರಯಾಣಿಕರು ಸಿಕ್ಕಷ್ಟನ್ನು ಕೈಗೆತ್ತಿಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Migrant Workers Loot Food Packets At Railway Station.

#Viral | Migrants Loot Food Packets At Itarsi Railway Station In Madhya Pradesh.This video is going Viral on Social Media and the Migrants were traveling on Shramik Special Train.

Posted by Kashmir Patrika on Monday, May 25, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...