alex Certify ಮಗನಿಗೆ ʼಲಾಕ್‌ ಡೌನ್ʼ ಎಂದು ಹೆಸರಿಟ್ಟ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ʼಲಾಕ್‌ ಡೌನ್ʼ ಎಂದು ಹೆಸರಿಟ್ಟ ದಂಪತಿ

ತ್ರಿಪುರಾ: “ಲಾಕ್‌ ಡೌನ್”,”ಕ್ವಾರಂಟೈನ್” ಈ ಪದಗಳು ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಪಡೆದಿವೆ. ಸಂಜು ಬೌರಿ ಮತ್ತು ಅವರ ಪತ್ನಿ ಮಂಜು ಬೌರಿ ತಮ್ಮ ಮಗುವಿಗೆ ಲಾಕ್‌ ಡೌನ್ ಎಂದು ಹೆಸರಿಟ್ಟಿದ್ದಾರೆ.

ರಾಜಸ್ತಾನದ ಪ್ಲಾಸ್ಟಿಕ್ ವ್ಯಾಪಾರಿಗಳಾಗಿರುವ ಇವರು ತಮ್ಮ ಊರಿನಿಂದ ತ್ರಿಪುರಾಕ್ಕೆ 6 ತಿಂಗಳಿಗೆ ಒಮ್ಮೆ ಹೋಗುತ್ತಿದ್ದರು. ಆದರೆ ಈ ಬಾರಿ ಲಾಕ್‌ ಡೌನ್ ನಿಂದಾಗಿ ದಂಪತಿ ತ್ರಿಪುರದಲ್ಲೇ ಉಳಿಯುವಂತಾಯಿತು.

ಗರ್ಭಿಣಿಯಾಗಿದ್ದ ಮಂಜು ಮಣಿಪುರದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿಗೆ ಗಂಡು ಮಗುವಾಗಿದೆ. ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನೀಡಿದ ಸಲಹೆಯ ಮೇರೆಗೆ ತಮ್ಮ ಮಗುವಿಗೆ ಲಾಕ್‌ ಡೌನ್ ಎಂದು ಹೆಸರು ಇಟ್ಟಿದ್ದಾರೆ.

“ಸರ್ಕಾರಿ ಅಧಿಕಾರಿಗಳು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಮತ್ತು ಅವರೇ ನಮಗೆ ರೇಶನ್ ವ್ಯವಸ್ಥೆಯನ್ನುಮಾಡಿದ್ದಾರೆ. ನಮಗೂ ಲಾಕ್‌ ಡೌನ್ ಹೆಸರು ಇಷ್ಟವಾಗಿದ್ದು ಅದಕ್ಕೆ ಅದೇ ಹೆಸರನ್ನು ಇಟ್ಟಿದ್ದೇವೆ ” ಎಂದು ಸಂಜಯ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಡೋರಿಯ ಜಿಲ್ಲೆಯಲ್ಲಿ ಗಂಡು ಮಗುವಿಗೆ ಲಾಕ್‌ ಡೌನ್ ಎಂದು ಹೆಸರಿಡಲಾಗಿತ್ತು. ಮತ್ತು ಜನತಾ ಕರ್ಫ್ಯೂ ದಿನ ಹುಟ್ಟಿದ ಹೆಣ್ಣು ಮಗುವಿಗೆ ಜನತಾ ಕರ್ಫ್ಯೂ ಎಂದೇ ಹೆಸರನ್ನು ಇಟ್ಟಿದ್ದು ಈ ಹಿಂದೆ ಸುದ್ದಿಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...