ರಾಜಸ್ಥಾನದ 20 ಮಂದಿ ತೃತೀಯ ಲಿಂಗಿಗಳು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಲಕ್ಷಗಟ್ಟಲೇ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಪುರಾಣದ ಕಾಲದಲ್ಲಿ ತೃತೀಯ ಲಿಂಗಿಗಳನ್ನ ಆಶೀರ್ವದಿಸಿದ್ದ ರಾಮ ಕಲಿಯುಗದಲ್ಲಿ ಈ ಸಮುದಾಯಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದ್ದ ಎಂಬ ನಂಬಿಕೆ ಇದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಳಿಲ ಸೇವೆ ಮಾಡಿದ ಮೇವಾರ್ ಪ್ರಾಂತ್ಯದ ತೃತೀಯ ಲಿಂಗಿ ರೇಖಾ ಬ್ವಾಜಿ, ತಮ್ಮ ಸಮುದಾಯದ ವತಿಯಿಂದ 5,11,111 ರೂಪಾಯಿ ಹಣವನ್ನ ದೇಗುಲ ನಿರ್ಮಾಣಕ್ಕೆ ನೀಡಿದ್ದಾರೆ.
ರೋಡ್ ರೋಮಿಯೋಗಳಿಗೆ ಪೊಲೀಸರಿಂದ ಖಡಕ್ ಸಂದೇಶ ರವಾನೆ
ಇನ್ನು ಈ ವಿಚಾರವಾಗಿ ಮಾತನಾಡಿದ ರೇಖಾ, ಇದೊಂದು ಐತಿಹಾಸಿಕ ಕ್ಷಣವಾಗಿದೆ. ದೇಶದಲ್ಲಿರುವ ಪ್ರತಿಯೊಬ್ಬರೂ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ. ಸಂಪೂರ್ಣ ಭಾರತಕ್ಕೆ ಶ್ರೀರಾಮನ ಆರ್ಶೀವಾದ ಸಿಗಲಿದೆ ಎಂದು ಹೇಳಿದ್ರು.
ಅದೇ ರೀತಿ ಬೋವಾರ್ ಪ್ರಾಂತ್ಯದ ಇನ್ನೊಬ್ಬ ತೃತೀಯ ಲಿಂಗಿ ಕಿರಣ್ ಬಾಯಿ, ಮಂದಿರ ನಿರ್ಮಾಣಕ್ಕೆ 3,21,000 ರೂಪಾಯಿ ದೇಣಿಗೆ ನೀಡಿದ್ರು. ರಾಜ್ಸಮಂದ್ನ ಮಮತಾ ಎಂಬವರು 1,51,000 ರೂಪಾಯಿ, ರಿಯಾ ಕುಮಾರಿ 1,01,1000 ರೂಪಾಯಿ ಸೇರಿದಂತೆ ಇನ್ನೂ ಹಲವು ಮಂದಿ ತೃತೀಯ ಲಿಂಗಿಗಳು ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ .