alex Certify ರಾಮ ಮಂದಿರ ನಿರ್ಮಾಣಕ್ಕೆ ತೃತೀಯ ಲಿಂಗಿಗಳಿಂದ ಲಕ್ಷಾನುಗಟ್ಟಲೇ ದೇಣಿಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮ ಮಂದಿರ ನಿರ್ಮಾಣಕ್ಕೆ ತೃತೀಯ ಲಿಂಗಿಗಳಿಂದ ಲಕ್ಷಾನುಗಟ್ಟಲೇ ದೇಣಿಗೆ…!

Rajasthan: Transgender Community Members Donate Lakhs For Ram Temple  Construction, Call It A 'Historic Moment'ರಾಜಸ್ಥಾನದ 20 ಮಂದಿ ತೃತೀಯ ಲಿಂಗಿಗಳು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಲಕ್ಷಗಟ್ಟಲೇ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಪುರಾಣದ ಕಾಲದಲ್ಲಿ ತೃತೀಯ ಲಿಂಗಿಗಳನ್ನ ಆಶೀರ್ವದಿಸಿದ್ದ ರಾಮ ಕಲಿಯುಗದಲ್ಲಿ ಈ ಸಮುದಾಯಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದ್ದ ಎಂಬ ನಂಬಿಕೆ ಇದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಳಿಲ ಸೇವೆ ಮಾಡಿದ ಮೇವಾರ್​ ಪ್ರಾಂತ್ಯದ ತೃತೀಯ ಲಿಂಗಿ ರೇಖಾ ಬ್ವಾಜಿ, ತಮ್ಮ ಸಮುದಾಯದ ವತಿಯಿಂದ 5,11,111 ರೂಪಾಯಿ ಹಣವನ್ನ ದೇಗುಲ ನಿರ್ಮಾಣಕ್ಕೆ ನೀಡಿದ್ದಾರೆ.

ರೋಡ್‌ ರೋಮಿಯೋಗಳಿಗೆ ಪೊಲೀಸರಿಂದ ಖಡಕ್‌ ಸಂದೇಶ ರವಾನೆ

ಇನ್ನು ಈ ವಿಚಾರವಾಗಿ ಮಾತನಾಡಿದ ರೇಖಾ, ಇದೊಂದು ಐತಿಹಾಸಿಕ ಕ್ಷಣವಾಗಿದೆ. ದೇಶದಲ್ಲಿರುವ ಪ್ರತಿಯೊಬ್ಬರೂ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ. ಸಂಪೂರ್ಣ ಭಾರತಕ್ಕೆ ಶ್ರೀರಾಮನ ಆರ್ಶೀವಾದ ಸಿಗಲಿದೆ ಎಂದು ಹೇಳಿದ್ರು.

ಅದೇ ರೀತಿ ಬೋವಾರ್​ ಪ್ರಾಂತ್ಯದ ಇನ್ನೊಬ್ಬ ತೃತೀಯ ಲಿಂಗಿ ಕಿರಣ್​ ಬಾಯಿ, ಮಂದಿರ ನಿರ್ಮಾಣಕ್ಕೆ 3,21,000 ರೂಪಾಯಿ ದೇಣಿಗೆ ನೀಡಿದ್ರು. ರಾಜ್ಸಮಂದ್​ನ ಮಮತಾ ಎಂಬವರು 1,51,000 ರೂಪಾಯಿ, ರಿಯಾ ಕುಮಾರಿ 1,01,1000 ರೂಪಾಯಿ ಸೇರಿದಂತೆ ಇನ್ನೂ ಹಲವು ಮಂದಿ ತೃತೀಯ ಲಿಂಗಿಗಳು ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...