ಒಂಬತ್ತು ತಿಂಗಳ ಲಾಕ್ಡೌನ್ನ ನಂತರ ಮೇಘಾಲಯವು ಡಿಸೆಂಬರ್ 21ರಿಂದ ಪ್ರವಾಸೋದ್ಯಮ ಆರಂಭಿಸಲು ಸಜ್ಜಾಗಿದೆ.
ಕೊರೊನಾ ವೈರಸ್ ಸಂಕಷ್ಟದಿಂದಾಗಿ ಮೇಘಾಲಯ ಸರ್ಕಾರವು ಮಾರ್ಚ್ ತಿಂಗಳಿನಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು.
ನಾವು ಡಿಸೆಂಬರ್ 21ರಿಂದ ಹೊರ ರಾಜ್ಯದ ಪ್ರವಾಸಿಗರಿಗೆ ಮೇಘಾಲಯ ಆಗಮನಕ್ಕೆ ಅನುಮತಿ ನೀಡಲಿದ್ದೇವೆ. ಆದರೆ ನಮ್ಮ ರಾಜ್ಯಕ್ಕೆ ಪ್ರವಾಸಕ್ಕೆಂದು ಬರುವ ಅನ್ಯರಾಜ್ಯಗಳ ನಿವಾಸಿಗಳು ಮೇಘ ಟೂರಿಸಂ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಳ್ಳೋದು ಕಡ್ಡಾಯವಾಗಿರಲಿದೆ ಎಂದು ಮೇಘಾಲಯಕ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ.
ಮೇಘಾಲಯಕ್ಕೆ ಪ್ರವಾಸಕ್ಕೆ ಬರುವವರು 72 ಗಂಟೆಗಳ ಒಳಗಾಗಿ ಕೊರೊನಾ ನೆಗೆಟಿವ್ ವರದಿ ಹೊಂದುವುದು ಕಡ್ಡಾಯವಾಗಿದೆ.