alex Certify ಜಮ್ಮು & ಕಾಶ್ಮೀರದ ಮೊದಲ ಬಸ್ ಚಾಲಕಿ ಈ ಪೂಜಾ ದೇವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮ್ಮು & ಕಾಶ್ಮೀರದ ಮೊದಲ ಬಸ್ ಚಾಲಕಿ ಈ ಪೂಜಾ ದೇವಿ

ಪೂಜಾ ದೇವಿ ಹೆಸರಿನ ಈ ದಿಟ್ಟ ಮಹಿಳೆಯ ಸಾಧನೆಗೆ ನೆಟ್ಟಿಗ ಸಮುದಾಯ ಭೇಷ್‌ಗಿರಿಯ ಚಪ್ಪಾಳೆ ತಟ್ಟುತ್ತಿದೆ.

ಲಿಂಗ ಸಂಬಂಧಿ ಮಿತಿಗಳಿಗೇ ಸವಾಲು ಎಸೆದ ಪೂಜಾ ಜಮ್ಮು & ಕಾಶ್ಮೀರದ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಮ್ಮು -ಕಥುವಾ ಮಾರ್ಗದಲ್ಲಿ ಪ್ರಯಾಣಿಕ ಬಸ್‌ ಚಾಲನೆ ಮಾಡುತ್ತಿರುವ ಪೂಜಾ ಅವರ ಚಿತ್ರವು ವೈರಲ್ ಆಗಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಪೂಜಾರ ಚಿತ್ರವೊಂದರ ಜೊತೆಗೆ ಅವರ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ರೈತರ ಮಗಳಾದ ಪೂಜಾಗೆ ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಯಾವಾಗಲೂ ಟ್ರಕ್ ಅಥವಾ ಬಸ್ ಚಾಲಕಿಯಾಗಲು ಬಯಸಿದ್ದ ಪೂಜಾರ ಕನಸುಗಳನ್ನು ಸಾಕಾರವಾಗಿಸಲು ಯಾವ ಅಡೆತಡೆಯೂ ಸಹ ಅಡ್ಡಿಯಾಗಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...