ಪೂಜಾ ದೇವಿ ಹೆಸರಿನ ಈ ದಿಟ್ಟ ಮಹಿಳೆಯ ಸಾಧನೆಗೆ ನೆಟ್ಟಿಗ ಸಮುದಾಯ ಭೇಷ್ಗಿರಿಯ ಚಪ್ಪಾಳೆ ತಟ್ಟುತ್ತಿದೆ.
ಲಿಂಗ ಸಂಬಂಧಿ ಮಿತಿಗಳಿಗೇ ಸವಾಲು ಎಸೆದ ಪೂಜಾ ಜಮ್ಮು & ಕಾಶ್ಮೀರದ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಮ್ಮು -ಕಥುವಾ ಮಾರ್ಗದಲ್ಲಿ ಪ್ರಯಾಣಿಕ ಬಸ್ ಚಾಲನೆ ಮಾಡುತ್ತಿರುವ ಪೂಜಾ ಅವರ ಚಿತ್ರವು ವೈರಲ್ ಆಗಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಪೂಜಾರ ಚಿತ್ರವೊಂದರ ಜೊತೆಗೆ ಅವರ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ರೈತರ ಮಗಳಾದ ಪೂಜಾಗೆ ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಯಾವಾಗಲೂ ಟ್ರಕ್ ಅಥವಾ ಬಸ್ ಚಾಲಕಿಯಾಗಲು ಬಯಸಿದ್ದ ಪೂಜಾರ ಕನಸುಗಳನ್ನು ಸಾಕಾರವಾಗಿಸಲು ಯಾವ ಅಡೆತಡೆಯೂ ಸಹ ಅಡ್ಡಿಯಾಗಲಿಲ್ಲ.