alex Certify ʼಮಿಸ್​ ಇಂಟರ್​ನ್ಯಾಷನಲ್​ ಟ್ರಾನ್ಸ್ 2021ʼರಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ ಆರ್ಚಿ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಿಸ್​ ಇಂಟರ್​ನ್ಯಾಷನಲ್​ ಟ್ರಾನ್ಸ್ 2021ʼರಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ ಆರ್ಚಿ ಸಿಂಗ್

ಈ ವರ್ಷ ಕೊಲಂಬಿಯಾದಲ್ಲಿ ನಡೆಯುತ್ತಿರುವ ಮಿಸ್​ ಇಂಟರ್​ನ್ಯಾಷನಲ್ ಟ್ರಾನ್ಸ್​​​ 2021ರಲ್ಲಿ ಭಾರತವನ್ನ ಆರ್ಚಿ ಸಿಂಗ್​​ ಎಂಬ ಮಾಡೆಲ್​ ಪ್ರತಿನಿಧಿಸಲಿದ್ದಾರೆ.

ನೀವು ನಿಜವಾದ ಮಹಿಳೆ ಅಲ್ಲ ಎಂದು ನನಗೆ ಮಾಡೆಲಿಂಗ್​ ಶೂಟ್​ ಏಜೆಂಟರು ನನ್ನನ್ನ ಒಮ್ಮೆ ಹೀಯಾಳಿಸಿದ್ದರು ಅಂತಾ ನೋವಿನ ಕತೆ ಹೇಳ್ತಾರೆ ಆರ್ಚಿ ಸಿಂಗ್​. ನಾನು ಒಬ್ಬ ಮಹಿಳೆ, ಲಿಂಗ ಪರಿವರ್ತನೆ ಮಾಡಿಕೊಂಡಿರೋದು ನಿಜ. ಆದರೆ ನಾನೂ ಕೂಡ ಮಹಿಳೆಗೆ ಸಮಾನಳು. ನನ್ನ ಅಧಿಕೃತ ಐಡಿ ಕಾರ್ಡ್​ಗಳಲ್ಲಿ ಮಹಿಳೆ ಎಂದೇ ನಮೂದಾಗಿದೆ. ಆದರೂ ನನಗೆ ತಾರತಮ್ಯ ಮಾಡಲಾಯ್ತು. ನನ್ನ ಟ್ರಾನ್ಸ್ ಎಂದು ಕರೆದರು ಎಂದು ಹೇಳುತ್ತಾ ಆರ್ಚಿ ಭಾವುಕರಾದ್ರು.

ದೆಹಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಆರ್ಚಿ ಮಹಿಳೆಯಾಗಿ ಬದಲಾಗತೊಡಗಿದ್ದಳು. ಆರ್ಚಿ ಕುಟುಂಬಸ್ಥರೂ ಇದಕ್ಕೆ ಸಾಥ್​ ನೀಡಿದ್ರು. 17ನೇ ವಯಸ್ಸಿನಲ್ಲಿ ಸಂಪೂರ್ಣವಾಗಿ ಗುರುತನ್ನ ಬದಲಾಯಿಸಿಕೊಂಡರು. ಮಾಡೆಲಿಂಗ್​ ಲೋಕದಲ್ಲಿ ಆಸಕ್ತಿ ಹೊಂದಿದ್ದ ಆರ್ಚಿ ಇದರ ಮೂಲಕ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದ್ದಾರೆ.

ಮಿಸ್​ ಟ್ರಾನ್ಸ್ ಇಂಡಿಯಾ ಪ್ರಶಸ್ತಿ ವಿಜೇತೆಯಾದ ಆರ್ಚಿ ಅನೇಕ ಫ್ಯಾಶನ್​ ಶೋಗಳಲ್ಲಿ ತಾರತಮ್ಯವನ್ನ ಅನುಭವಿಸಿದ್ದಾರೆ. ಲಿಂಗ ಪ್ರತಿಭೆ ಪ್ರದರ್ಶನಕ್ಕೆ ತಡೆಗೋಡೆಯಾಗಬಾರದು ಎಂದು ಆರ್ಚಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...