ಈ ವರ್ಷ ಕೊಲಂಬಿಯಾದಲ್ಲಿ ನಡೆಯುತ್ತಿರುವ ಮಿಸ್ ಇಂಟರ್ನ್ಯಾಷನಲ್ ಟ್ರಾನ್ಸ್ 2021ರಲ್ಲಿ ಭಾರತವನ್ನ ಆರ್ಚಿ ಸಿಂಗ್ ಎಂಬ ಮಾಡೆಲ್ ಪ್ರತಿನಿಧಿಸಲಿದ್ದಾರೆ.
ನೀವು ನಿಜವಾದ ಮಹಿಳೆ ಅಲ್ಲ ಎಂದು ನನಗೆ ಮಾಡೆಲಿಂಗ್ ಶೂಟ್ ಏಜೆಂಟರು ನನ್ನನ್ನ ಒಮ್ಮೆ ಹೀಯಾಳಿಸಿದ್ದರು ಅಂತಾ ನೋವಿನ ಕತೆ ಹೇಳ್ತಾರೆ ಆರ್ಚಿ ಸಿಂಗ್. ನಾನು ಒಬ್ಬ ಮಹಿಳೆ, ಲಿಂಗ ಪರಿವರ್ತನೆ ಮಾಡಿಕೊಂಡಿರೋದು ನಿಜ. ಆದರೆ ನಾನೂ ಕೂಡ ಮಹಿಳೆಗೆ ಸಮಾನಳು. ನನ್ನ ಅಧಿಕೃತ ಐಡಿ ಕಾರ್ಡ್ಗಳಲ್ಲಿ ಮಹಿಳೆ ಎಂದೇ ನಮೂದಾಗಿದೆ. ಆದರೂ ನನಗೆ ತಾರತಮ್ಯ ಮಾಡಲಾಯ್ತು. ನನ್ನ ಟ್ರಾನ್ಸ್ ಎಂದು ಕರೆದರು ಎಂದು ಹೇಳುತ್ತಾ ಆರ್ಚಿ ಭಾವುಕರಾದ್ರು.
ದೆಹಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಆರ್ಚಿ ಮಹಿಳೆಯಾಗಿ ಬದಲಾಗತೊಡಗಿದ್ದಳು. ಆರ್ಚಿ ಕುಟುಂಬಸ್ಥರೂ ಇದಕ್ಕೆ ಸಾಥ್ ನೀಡಿದ್ರು. 17ನೇ ವಯಸ್ಸಿನಲ್ಲಿ ಸಂಪೂರ್ಣವಾಗಿ ಗುರುತನ್ನ ಬದಲಾಯಿಸಿಕೊಂಡರು. ಮಾಡೆಲಿಂಗ್ ಲೋಕದಲ್ಲಿ ಆಸಕ್ತಿ ಹೊಂದಿದ್ದ ಆರ್ಚಿ ಇದರ ಮೂಲಕ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದ್ದಾರೆ.
ಮಿಸ್ ಟ್ರಾನ್ಸ್ ಇಂಡಿಯಾ ಪ್ರಶಸ್ತಿ ವಿಜೇತೆಯಾದ ಆರ್ಚಿ ಅನೇಕ ಫ್ಯಾಶನ್ ಶೋಗಳಲ್ಲಿ ತಾರತಮ್ಯವನ್ನ ಅನುಭವಿಸಿದ್ದಾರೆ. ಲಿಂಗ ಪ್ರತಿಭೆ ಪ್ರದರ್ಶನಕ್ಕೆ ತಡೆಗೋಡೆಯಾಗಬಾರದು ಎಂದು ಆರ್ಚಿ ಹೇಳಿದ್ದಾರೆ.