ಕೋವಿಡ್ ಆಸ್ಪತ್ರೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಹಿಮಾಚಲ ಪ್ರದೇಶ ಸಿಎಂ ಜೈ ರಾಮ್ ಠಾಕೂರ್ ಜೂನ್ ತಿಂಗಳವರೆಗೂ 3000 ರೂಪಾಯಿ ಪ್ರೋತ್ಸಾಹ ಧನವನ್ನ ನೀಡೋದಾಗಿ ಘೋಷಿಸಿದ್ದಾರೆ.
ನಾಲ್ಕು ಹಾಗೂ ಐದನೇ ಸೆಮಿಸ್ಟರ್ ಎಂಬಿಬಿಎಸ್ ವಿದ್ಯಾರ್ಥಿಗಳು, ಗುತ್ತಿಗೆ ಆಧಾರಿತ ವೈದ್ಯರು 3000 ರೂಪಾಯಿ ಪ್ರೋತ್ಸಾಹ ಧನವನ್ನ ಸ್ವೀಕರಿಸಲಿದ್ದಾರೆ.
ಅದೇ ರೀತಿ ನರ್ಸಿಂಗ್ ಸಿಬ್ಬಂದಿ, ಜಿಎನ್ಎಂ ಮೂರನೇ ವರ್ಷದ ವಿದ್ಯಾರ್ಥಿಗಳು ಹಾಗೂ ಪ್ರಯೋಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಪ್ರತಿ ತಿಂಗಳು 1500 ರೂಪಾಯಿ ಪ್ರೋತ್ಸಾಹ ಧನವನ್ನ ಪಡೆಯಲಿದ್ದಾರೆ ಎಂದು ಜೈರಾಮ್ ಠಾಕೂರ್ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಕಂಗ್ರಾದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಜೈ ರಾಮ್ ಠಾಕೂರ್ ಈ ನಿರ್ಧಾರವನ್ನ ಪ್ರಕಟಿಸಿದ್ದಾರೆ.
ನಿನ್ನೆಯಷ್ಟೇ ಸಿಎಂ ಜೈ ರಾಮ್ ಠಾಕೂರ್ ರಾಧಸ್ವಾಮಿ ಸತ್ಸಂಗ್ ವ್ಯಾಸ್ಗೆ ಭೇಡಿ ನೀಡಿ ಮುಂದಿನ 10 ದಿನಗಳಲ್ಲಿ 250 ಹೆಚ್ಚುವರಿ ಕೋವಿಡ್ ಬೆಡ್ಗಳನ್ನ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಂಗ್ರಾದಲ್ಲಿ 3,59,489 ಸ್ಯಾಂಪಲ್ಗಳನ್ನ ಕಲೆ ಹಾಕಲಾಗಿದ್ದು ಇದರಲ್ಲಿ 19,570 ವರದಿಗಳು ಪಾಸಿಟಿವ್ ಬಂದಿದೆ ಎಂದು ಕಂಗ್ರಾ ಉಪ ಕಮಿಷನರ್ ರಾಕೇಜ್ ಪ್ರಜಾಪತಿ ಹೇಳಿದ್ರು.