alex Certify ಕೋವಿಡ್​ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ MBBS ವಿದ್ಯಾರ್ಥಿಗಳಿಗೆ 3 ಸಾವಿರ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ MBBS ವಿದ್ಯಾರ್ಥಿಗಳಿಗೆ 3 ಸಾವಿರ ರೂ.

ಕೋವಿಡ್​ ಆಸ್ಪತ್ರೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್​ ಸಿಬ್ಬಂದಿಗೆ ಹಿಮಾಚಲ ಪ್ರದೇಶ ಸಿಎಂ ಜೈ ರಾಮ್ ಠಾಕೂರ್​​ ಜೂನ್​ ತಿಂಗಳವರೆಗೂ 3000 ರೂಪಾಯಿ ಪ್ರೋತ್ಸಾಹ ಧನವನ್ನ ನೀಡೋದಾಗಿ ಘೋಷಿಸಿದ್ದಾರೆ.

ನಾಲ್ಕು ಹಾಗೂ ಐದನೇ ಸೆಮಿಸ್ಟರ್​ ಎಂಬಿಬಿಎಸ್​ ವಿದ್ಯಾರ್ಥಿಗಳು, ಗುತ್ತಿಗೆ ಆಧಾರಿತ ವೈದ್ಯರು 3000 ರೂಪಾಯಿ ಪ್ರೋತ್ಸಾಹ ಧನವನ್ನ ಸ್ವೀಕರಿಸಲಿದ್ದಾರೆ.

ಅದೇ ರೀತಿ ನರ್ಸಿಂಗ್​ ಸಿಬ್ಬಂದಿ, ಜಿಎನ್​ಎಂ ಮೂರನೇ ವರ್ಷದ ವಿದ್ಯಾರ್ಥಿಗಳು ಹಾಗೂ ಪ್ರಯೋಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಪ್ರತಿ ತಿಂಗಳು 1500 ರೂಪಾಯಿ ಪ್ರೋತ್ಸಾಹ ಧನವನ್ನ ಪಡೆಯಲಿದ್ದಾರೆ ಎಂದು ಜೈರಾಮ್​ ಠಾಕೂರ್​ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಕಂಗ್ರಾದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಜೈ ರಾಮ್​ ಠಾಕೂರ್​ ಈ ನಿರ್ಧಾರವನ್ನ ಪ್ರಕಟಿಸಿದ್ದಾರೆ.

ನಿನ್ನೆಯಷ್ಟೇ ಸಿಎಂ ಜೈ ರಾಮ್​ ಠಾಕೂರ್​ ರಾಧಸ್ವಾಮಿ ಸತ್ಸಂಗ್​ ವ್ಯಾಸ್​​ಗೆ ಭೇಡಿ ನೀಡಿ ಮುಂದಿನ 10 ದಿನಗಳಲ್ಲಿ 250 ಹೆಚ್ಚುವರಿ ಕೋವಿಡ್​​ ಬೆಡ್​ಗಳನ್ನ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಂಗ್ರಾದಲ್ಲಿ 3,59,489 ಸ್ಯಾಂಪಲ್​ಗಳನ್ನ ಕಲೆ ಹಾಕಲಾಗಿದ್ದು ಇದರಲ್ಲಿ 19,570 ವರದಿಗಳು ಪಾಸಿಟಿವ್​ ಬಂದಿದೆ ಎಂದು ಕಂಗ್ರಾ ಉಪ ಕಮಿಷನರ್​ ರಾಕೇಜ್​ ಪ್ರಜಾಪತಿ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...