alex Certify ಬೆಚ್ಚಿಬೀಳಿಸುವಂತಿದೆ ಮೇ ತಿಂಗಳಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಮೇ ತಿಂಗಳಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ

ದೇಶದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಕೊರೊನಾ ವೈರಸ್​​ನಿಂದಾಗಿ ಮೇ ತಿಂಗಳಲ್ಲಿ ಬರೋಬ್ಬರಿ 1.03 ಲಕ್ಷ ಮಂದಿ ದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಮೇ ತಿಂಗಳಲ್ಲಿ ಪ್ರತಿ ಗಂಟೆಗೆ ಸರಾಸರಿ 165 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಕೋವಿಡ್​ನಿಂದಾಗಿ ಒಟ್ಟು 3.11 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

2020ರಲ್ಲಿ ದೇಶದಲ್ಲಿ ಕೊರೊನಾದಿಂದ 1.48 ಲಕ್ಷ ಮಂದಿ ಬಲಿಯಾಗಿದ್ದರು. ಆದರೆ ಏಪ್ರಿಲ್ ಹಾಗೂ ಮೇ​ ತಿಂಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ. ಕೊರೊನಾ ಶುರುವಾದಾಗಿನಿಂದ ಇಲ್ಲಿಯವರೆಗೆ ಕೇವಲ ಮೇ ತಿಂಗಳಲ್ಲಿ 33 ಪ್ರತಿಶತ ಕೊರೊನಾ ಸಾವುಗಳು ವರದಿಯಾಗಿದೆ.

ಮೇ ತಿಂಗಳಲ್ಲಿ ಪ್ರತಿ ದಿನ ದೇಶದಲ್ಲಿ 3400ಕ್ಕೂ ಹೆಚ್ಚು ಕೊರೊನಾ ಸಾವುಗಳು ವರದಿಯಾಗಿವೆ. ಕಡಿಮೆ ಅಂದರೂ 13 ದಿನಗಳ ಕಾಲ ಈ ಮರಣ ಪ್ರಮಾಣ 4000 ದ ಗಡಿ ದಾಟಿದೆ. ಮೇ 19 ಅತ್ಯಂತ ಕೆಟ್ಟ ದಿನವಾಗಿದ್ದು ಅಂದು ಅತ್ಯಧಿಕ ಅಂದರೆ 4529 ಮಂದಿ ಸಾವನ್ನಪ್ಪಿದ್ದರು.

ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಏಪ್ರಿಲ್​ 1ರಿಂದ ಕಡಿಮೆ ಅಂದರೂ 577 ಮಕ್ಕಳು ಪೋಷಕರನ್ನ ಕಳೆದುಕೊಂಡು ಅನಾಥವಾಗಿವೆಯಂತೆ..!

ಸೋಮವಾರದ ಹೊತ್ತಿಗೆ ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ 3 ಲಕ್ಷದ ಗಡಿ ದಾಟಿದ್ದು ಈ ಮೂಲಕ ಅಮೆರಿಕ ಹಾಗೂ ಬ್ರೆಜಿಲ್​ ಹೊರತುಪಡಿಸಿ ವಿಶ್ವದಲ್ಲೇ ಅತೀ ಹೆಚ್ಚು ಕೋವಿಡ್​ ಸಾವು ಕಂಡ ರಾಷ್ಟ್ರ ಎಂದು ಹೆಸರು ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...