ಚಿರತೆ ಅಮ್ಮ-ಮಗು ಜೋಡಿಯೊಂದರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಚಿರತೆ ಹಾಗೂ ಅದರ ಮರಿಯು ಜೊತೆಯಾಗಿ ನೀರು ಕುಡಿಯುತ್ತಿರುವ ಈ ಚಿತ್ರವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್ ಮಾಡಿಕೊಂಡಿದ್ದಾರೆ.
ತಾಯಿ-ಮಗುವಿನ ನಡುವಿನ ಸುಮಧುರ ಬಾಂಧವ್ಯವನ್ನು ಈ ಚಿತ್ರ ತೋರುತ್ತಿದೆ. ಬ್ಯಾಕ್ ಗ್ರೌಂಡ್‌ನಲ್ಲಿ ನೀರವತೆಯ ನಡುವೆ ಪಕ್ಷಿಗಳ ಕಲರವ ಸಹ ಕೇಳಿ ಬರುತ್ತಿದ್ದು, ಈ ವಿಡಿಯೋವನ್ನು ನೋಡುವುದು ಆನಂದಮಯ ಅನುಭವವಾಗಿದೆ.