ಇಡೀ ದೇಶದಲ್ಲಿ ಕೊರೊನಾ, ಪ್ರವಾಹದ ನಡುವೆ ನೀಟ್ ಹಾಗೂ ಜೆಇಇ ಪರೀಕ್ಷೆ ನಡೆಸಲು ಕೇಂದ್ರ ಸಚಿವರು ಮುಂದಾಗಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ನಡುವೆ, ಇದೀಗ ಪರೀಕ್ಷಾ ಮಾರ್ಗಸೂಚಿ ಬಗ್ಗೆಯೂ ಅಸಮಾಧಾನ ವ್ಯಕ್ತವಾಗುತ್ತಿದೆ.
ಕೆಲ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಇದರ ಮಧ್ಯೆ ವಿದ್ಯಾರ್ಥಿನಿಯೊಬ್ಬರು, ಮುಖಕ್ಕೆ ಮಾಸ್ಕ್ ಧರಿಸಿ ಕೈಗೆ ಗ್ಲೌಸ್ ಹಾಕಿಕೊಂಡು ಈ ರೀತಿ ಮಾಸ್ಕ್, ಗ್ಲೌಸ್ ಹಾಕಿಕೊಂಡು ಪರೀಕ್ಷೆ ಬರೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಬೆವರಿನಲ್ಲಿ ಒದ್ದೆಯಾಗುವ ಗ್ಲೌಸ್ ಹಾಕಿಕೊಂಡು 20 ನಿಮಿಷಕ್ಕಿಂತ ಹೆಚ್ಚು ಕೂರುವುದೇ ದೊಡ್ಡ ಸವಾಲು. ಇನ್ನು ಅದರಲ್ಲಿ ಗಂಟೆಗಟ್ಟಲೆ ಪರೀಕ್ಷೆ ಹೇಗೆ ಬರೆಯಬೇಕು…? ಕೇಂದ್ರ ಸಚಿವರು ಹಾಗೂ ಪರೀಕ್ಷೆ ಬೇಕು ಎನ್ನುತ್ತಿರುವವರು, ಬಂದು ಪರೀಕ್ಷೆ ಬರೆಯಲಿ ಎಂದು ಸವಾಲು ಹಾಕಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
ಈ ಮಧ್ಯೆ ಬಿಜೆಪಿಯೇತರ ಆರು ಸರಕಾರಗಳು ನೀಟ್ ನಡೆಸದಂತೆ ಸುಪ್ರೀಂ ಮೊರೆ ಹೋಗಿದ್ದರೆ, ಕಾಂಗ್ರೆಸ್, ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.
https://twitter.com/d_swati_04/status/1298104572330700800?ref_src=twsrc%5Etfw%7Ctwcamp%5Etweetembed%7Ctwterm%5E1298104572330700800%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fmasks-fog-gloves-sweat-neet-aspirant-slams-exam-guidelines-in-viral-video-2827477.html