ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದರ ವಿಚಾರಣೆಯಲ್ಲಿ ಮುಂಬೈ ಪೋಕ್ಸೊ ಕೋರ್ಟ್ ಆರೋಪಿಗೆ ಜಾಮೀನು ನೀಡಿದೆ. ಆರೋಪಿಗೆ ಜಾಮೀನು ನೀಡಲು ಆತನ ಹೇಳಿಕೆ ಮುಖ್ಯ ಕಾರಣವಾಗಿದೆ. 25 ವರ್ಷದ ಆರೋಪಿ, ಅಪ್ರಾಪ್ತೆ ಗರ್ಭಿಣಿಯಾಗಲು ಕಾರಣವಾಗಿದ್ದ. ಆರೋಪಿ, ಅಪ್ರಾಪ್ತೆಯನ್ನು ಮದುವೆಯಾಗುವ ಭರವಸೆ ನೀಡಿದ್ದಾನೆ. ಈ ಕಾರಣಕ್ಕೆ ಕೋರ್ಟ್ ಆತನಿಗೆ ಜಾಮೀನು ನೀಡಿದೆ.
ಆರೋಪಿ ವಿವಾಹಿತ. ಆತನ ವಿರುದ್ಧ ಪೀಡಿತೆ ತಾಯಿ ದೂರು ನೀಡಿದ್ದಳು. ಆದ್ರೆ ಈಗ ಆಕೆಯೇ ಕೋರ್ಟ್ ಗೆ ಮನವಿ ಸಲ್ಲಿಸಿದ್ದಳು. ಆರೋಪಿ, ಮಗಳನ್ನು ಮದುವೆಯಾಗಲು ಸಿದ್ಧನಾಗಿದ್ದು, ಆತನಿಗೆ ಜಾಮೀನು ನೀಡುವಂತೆ ಕೇಳಿದ್ದಳು. ಮಗಳಿಗೆ ಮಗು ಹುಟ್ಟಿದ್ದು, ಮಗಳ ಮದುವೆ ಮಾಡುವುದಾಗಿ ಹೇಳಿದ್ದಳು. ಸದ್ಯ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಇಬ್ಬರು ಒಪ್ಪಿಗೆ ಮೇರೆಗೆ ಸಂಬಂಧ ಬೆಳೆಸಿದ್ದಾರೆಂದು ಕೋರ್ಟ್ ಹೇಳಿದೆ.
ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್ ಮಾಡಿದ ಚಾಲಕ..!
16 ವರ್ಷದ ಬಾಲಕಿ ತಂದೆಗೆ ಆರೋಪಿ ಪರಿಚಿತನಾಗಿದ್ದ. ಆತನ ಮೊದಲ ಮದುವೆ ವಿಷ್ಯ ಬಾಲಕಿಗೆ ತಿಳಿದಿರಲಿಲ್ಲ. ಗರ್ಭ ಧರಿಸಿರುವ ವಿಷ್ಯವನ್ನು ಮನೆಯವರಿಗೆ ಹೇಳದಂತೆ ಆರೋಪಿ ಬೆದರಿಸಿದ್ದನಂತೆ. ಬಾಲಕಿಗೆ 18 ವರ್ಷವಾಗ್ತಿದ್ದಂತೆ ಆಕೆಯನ್ನು ಮದುವೆಯಾಗುವುದಾಗಿ ಆರೋಪಿ ಹೇಳಿದ್ದಾನೆ. ಎರಡು ವರ್ಷದ ನಂತ್ರ ಇಬ್ಬರ ಮದುವೆ ನಡೆಯಲಿದೆ. ಆತನನ್ನು ಜೈಲಿನಲ್ಲಿ ಇಡುವ ಅಗತ್ಯವಿಲ್ಲವೆಂದು ಕೋರ್ಟ್ ಹೇಳಿದೆ.