ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಈ ನಡುವೆ ರೈತರ ಪ್ರತಿಭಟನಾ ನಿರತ ವೇದಿಕೆ ಮೇಲೆಯೇ ರೈತಮುಖಂಡನ ಮಗನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ನಡೆದಿದೆ.
ಮಧ್ಯಪ್ರದೇಶದ ರೇವಾ ಪ್ರತಿಭಟನಾ ವೇದಿಕೆಯಲ್ಲಿ ಫಾರ್ಮರ್ ಯೂನಿಯನ್ ಲೀಡರ್ ಪುತ್ರ ಸಚಿನ್ ಹಾಗೂ ಅಸ್ಮಾ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೇದಿಕೆಯ ಮೇಲೆ ಇಡಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ನವಜೋಡಿಗಳು ಪ್ರದಕ್ಷಿಣೆ ಹಾಕುವ ಮೂಲಕ ಸಪ್ತಪದಿ ತುಳಿದರು.
ಭಾಂಗ್ರಾ ನೃತ್ಯದ ಮೂಲಕ ಐರಿಶ್ ಹಬ್ಬದ ಮೆರಗು ಹೆಚ್ಚಿಸಿದ ಪಂಜಾಬಿ ಮೂಲದ ತಂಡ
ಇದೇ ವೇಳೆ ನವಜೋಡಿಗಳು ತಮಗೆ ಉಡುಗೊರೆ ನೀಡಿದ್ದ ಹಣ, ಅಗತ್ಯ ವಸ್ತುಗಳನ್ನು ಪ್ರತಿಭಟನಾ ನಿರತ ರೈತರಿಗೆ ದಾನ ನೀಡಿ ಮಾನವೀಯತೆ ಮೆರೆದಿದ್ದಾರೆ.