ಶರಣಾಗತ ನಕ್ಸಲನೊಬ್ಬ ಶಸ್ತ್ರಾಸ್ತ್ರಗಳನ್ನ ಬದಿಗಿಟ್ಟು ಜಿಲ್ಲಾ ರಿಸರ್ವ್ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ ಬಳಿಕ ಮಾವೋವಾದಿಗಳಿಂದ ಹತನಾದ ದಾರುಣ ಘಟನೆ ಛತ್ತೀಸ್ಗಡದ ವಿಜಯಪುರದಲ್ಲಿ ನಡೆದಿದೆ. ತನ್ನ ಮಕ್ಕಳು ಹಾಗೂ ಕುಟುಂಬಸ್ಥರನ್ನ ಭೇಟಿಯಾಗೋಕೆಂದು ವಿಜಯಪುರದಲ್ಲಿರುವ ಮನೆಗೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ.
ಅಂದಹಾಗೆ ಸೋಮ್ದು ರಾಮ್ ಪಯಮ್ ಅಲಿಯಾಸ್ ಮಲ್ಲೇಶ್ರನ್ನ ಆತನ ಸ್ವಂತ ಸಹೋದರನೇ ಕೊಲೆ ಮಾಡಿದ್ದಾನೆ. ಆತನ ಸಹೋದರ ಇನ್ನೂ ಮಾವೋವಾದಿಯಾಗಿದ್ದಾನೆ. ಮಲ್ಲೇಶ್ನನ್ನ ಮಕ್ಕಳ ಹಾಗೂ ಕುಟುಂಬಸ್ಥರ ಎದುರೇ ಥಳಿಸಿ ಬಳಿಕ ಶಸ್ತ್ರಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದೆ.
ಕೈಮೇಲೆ ಜೇನ್ನೊಣಗಳ ಹಿಂಡನ್ನೇ ಸಾಗಿಸಿದ ಭೂಪ…!
ಮಲ್ಲೇಶ್ ಕುಟುಂಬಸ್ಥರನ್ನ ಭೇಟಿಯಾಗಲು ಕೊಟ್ರಾಪಲ್ಗೆ ತೆರಳಿದ್ದರು. ಈ ವೇಳೆ ಆತನ ಸಹೋದರ ಬುರ್ಕಾ ಪೋಯಮಿ ಅಲಿಯಾಸ್ ಕೋಸಾ ಈ ದಾಳಿ ನಡೆಸಿದ್ದಾನೆ. ಕೋಸಾ ಶರಣಾಗತಿಗೆ ಮಲ್ಲೇಶ್ ಮನವೊಲಿಸಲು ಪ್ರಯತ್ನಿಸಿದ್ದೇ ಈ ಕೊಲೆಗೆ ಕಾರಣವಿರಬಹುದೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. 2014ರಲ್ಲಿ ಶರಣಾಗಿದ್ದ ಮಲ್ಲೇಶ್ ಡಿಆರ್ಜಿಗೆ ಸೇರಿಕೊಂಡಿದ್ದರು.