alex Certify ಮೆನುವಿನಲ್ಲಿರುವ ಖಾದ್ಯಗಳ ಹೆಸರು ಹೇಳಲು ಬರುತ್ತಿಲ್ಲವೇ…? ಹಾಗಾದ್ರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆನುವಿನಲ್ಲಿರುವ ಖಾದ್ಯಗಳ ಹೆಸರು ಹೇಳಲು ಬರುತ್ತಿಲ್ಲವೇ…? ಹಾಗಾದ್ರೆ ಹೀಗೆ ಮಾಡಿ

Man's Hilarious Trick to Avoid Messing up Complicated Coffee Name While Ordering is All of Us

ಬಹಳಷ್ಟು ಬಾರಿ ರೆಸ್ಟೋರೆಂಟ್ ‌ಗಳಿಗೆ ಹೋದಾಗ ಅಲ್ಲಿನ ಮೆನುವಿನಲ್ಲಿರುವ ಖಾದ್ಯಗಳ ಹೆಸರುಗಳನ್ನು ಹೇಳಲು ನಮಗೆ ಆಗದೇ ಇರುವ ಸಂದರ್ಭಗಳನ್ನು ಎದುರಿಸಿದ್ದೇವೆ. ಅದರಲ್ಲೂ ಇಟಾಲಿಯನ್, ಫ್ರೆಂಚ್ ಹಾಗೂ ಸ್ಪಾನಿಷ್‌ ಖಾದ್ಯಗಳ ಹೆಸರುಗಳ ಉಚ್ಚಾರ ಬಲೇ ಟ್ರಿಕ್ಕೀ ಎನಿಸುತ್ತದೆ.

ಕಾಫಿ ಶಾಪ್ ಒಂದಕ್ಕೆ ಹೋದಾಗ, ಅಲ್ಲಿರುವ ವಿವಿಧ ಖಾದ್ಯಗಳ ಹೆಸರುಗಳನ್ನು ಬಹಳ ಆರಾಮವಾಗಿ ಉಚ್ಚರಿಸಬಲ್ಲ ವ್ಯಕ್ತಿ ಹಾಗೂ ಆರ್ಡರ್‌ ಮಾಡುವ ಸಂದರ್ಭದಲ್ಲಿ ಖಾದ್ಯಗಳ ಹೆಸರುಗಳು ಹೇಳಲು ಪರದಾಡುವ ವ್ಯಕ್ತಿಗಳಿಬ್ಬರ ಅಣುಕು ಚಿತ್ರಗಳನ್ನು ಸೇರಿಸಿ ಮಾಡಿದ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ.

“ಸ್ಟಾರ್‌ ಬಕ್ಸ್‌ನಂಥ ರೆಸ್ಟೋರೆಂಟ್‌ ‌ಗಳಿಗೆ ಹೋದಾಗ ಮುಜುಗರ ಆಗುವುದನ್ನು ತಪ್ಪಿಸಿಕೊಳ್ಳಲು ಇದೊಂದು ಒಳ್ಳೆ ಟ್ರಿಕ್” ಎಂದು ಈ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ ಚೇತನ್ ಗೋಯೆಲ್ ಹೆಸರಿನ ಈ ಇನ್‌ಸ್ಟಾಗ್ರಾಂ ಬಳಕೆದಾರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...