
ಬಹಳಷ್ಟು ಬಾರಿ ರೆಸ್ಟೋರೆಂಟ್ ಗಳಿಗೆ ಹೋದಾಗ ಅಲ್ಲಿನ ಮೆನುವಿನಲ್ಲಿರುವ ಖಾದ್ಯಗಳ ಹೆಸರುಗಳನ್ನು ಹೇಳಲು ನಮಗೆ ಆಗದೇ ಇರುವ ಸಂದರ್ಭಗಳನ್ನು ಎದುರಿಸಿದ್ದೇವೆ. ಅದರಲ್ಲೂ ಇಟಾಲಿಯನ್, ಫ್ರೆಂಚ್ ಹಾಗೂ ಸ್ಪಾನಿಷ್ ಖಾದ್ಯಗಳ ಹೆಸರುಗಳ ಉಚ್ಚಾರ ಬಲೇ ಟ್ರಿಕ್ಕೀ ಎನಿಸುತ್ತದೆ.
ಕಾಫಿ ಶಾಪ್ ಒಂದಕ್ಕೆ ಹೋದಾಗ, ಅಲ್ಲಿರುವ ವಿವಿಧ ಖಾದ್ಯಗಳ ಹೆಸರುಗಳನ್ನು ಬಹಳ ಆರಾಮವಾಗಿ ಉಚ್ಚರಿಸಬಲ್ಲ ವ್ಯಕ್ತಿ ಹಾಗೂ ಆರ್ಡರ್ ಮಾಡುವ ಸಂದರ್ಭದಲ್ಲಿ ಖಾದ್ಯಗಳ ಹೆಸರುಗಳು ಹೇಳಲು ಪರದಾಡುವ ವ್ಯಕ್ತಿಗಳಿಬ್ಬರ ಅಣುಕು ಚಿತ್ರಗಳನ್ನು ಸೇರಿಸಿ ಮಾಡಿದ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
“ಸ್ಟಾರ್ ಬಕ್ಸ್‌ನಂಥ ರೆಸ್ಟೋರೆಂಟ್ ಗಳಿಗೆ ಹೋದಾಗ ಮುಜುಗರ ಆಗುವುದನ್ನು ತಪ್ಪಿಸಿಕೊಳ್ಳಲು ಇದೊಂದು ಒಳ್ಳೆ ಟ್ರಿಕ್” ಎಂದು ಈ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ ಚೇತನ್ ಗೋಯೆಲ್ ಹೆಸರಿನ ಈ ಇನ್‌ಸ್ಟಾಗ್ರಾಂ ಬಳಕೆದಾರ.
https://www.instagram.com/p/CGAVp7ipf2S/?utm_source=ig_web_copy_link