ನವದೆಹಲಿ: ದೇಶಾದ್ಯಂತ ಜೂನ್ 30 ರವರೆಗೆ ಲಾಕ್ಡೌನ್ 5.0 ಜಾರಿ ಮಾಡಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಮಾತನಾಡಲಿದ್ದಾರೆ. ದೇಶವಾಸಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡುವ ಸಾಧ್ಯತೆಯಿದೆ.
ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು, 5ನೇ ಹಂತದ ಲಾಕ್ ಡೌನ್ ಜೂನ್ 30 ರವರೆಗೆ ಜಾರಿಯಲ್ಲಿರುತ್ತದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶವಾಸಿಗಳನ್ನು ಉದ್ದೇಶಕ್ಕೆ ಮಾತನಾಡುತ್ತಿರುವುದು ಕುತೂಹಲ ಮೂಡಿಸಿದೆ. ಕೊರೋನಾ ಸೋಂಕು ತಡೆ, ದೇಶದ ಆರ್ಥಿಕತೆ ವಿಚಾರವಾಗಿ ಅವರು ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.