ಕೊನೆಗೂ ನಿಜವಾಯ್ತು ಪ್ರಶಾಂತ್ ಕಿಶೋರ್ ಚುನಾವಣಾ ಫಲಿತಾಂಶದ ಭವಿಷ್ಯ: ಟ್ವೀಟ್ ಆಯ್ತು ವೈರಲ್ 03-05-2021 3:42PM IST / No Comments / Posted In: Latest News, India ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಮಾಸ್ಟರ್ ಪ್ಲ್ಯಾನರ್ ಆಗಿದ್ದ ಪ್ರಶಾಂತ್ ಕಿಶೋರ್ ತಾವು ಚುನಾವಣಾ ಚಾಣಕ್ಯ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ನಡುವೆ ಟ್ವಿಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಪ್ರಶಾಂತ್ ಕಿಶೋರ್ ಈ ಹಿಂದೆ ಮಾಡಿದ್ದ ಟ್ವೀಟ್ ಒಂದು ವೈರಲ್ ಆಗಿದೆ. ಕಳೆದ ವರ್ಷ ಡಿಸೆಂಬರ್ 21ರಂದು ಮಾಡಿದ್ದ ಪ್ರಶಾಂತ್ ಕಿಶೋರ್ ಟ್ವೀಟ್ ಇದೀಗ ವ್ಯಾಪಕವಾಗಿ ಶೇರ್ ಆಗುತ್ತಿದೆ. ಈ ಟ್ವೀಟ್ನಲ್ಲಿ ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಎರಡಂಕಿ ದಾಟಲೂ ಹೆಣಗಾಡಲಿದೆ ಎಂದು ಹೇಳಿದ್ದರು. ಅಲ್ಲದೇ ಒಂದು ವೇಳೆ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಎರಡಂಕಿ ದಾಟಲು ಯಶಸ್ವಿಯಾದಲ್ಲಿ ತಾವು ಟ್ವಿಟರ್ನ್ನು ತ್ಯಜಿಸೋದಾಗಿ ಹೇಳಿದ್ದರು. ಈ ಟ್ವೀಟ್ ಇದೀಗ 62 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 14 500 ರಿಟ್ವೀಟ್ಗಳನ್ನ ಸಂಪಾದಿಸಿದೆ. ಇದೀಗ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ನೋಡಿದ ಅನೇಕರು ಪ್ರಶಾಂತ್ ಕಿಶೋರ್ ಈ ಟ್ವೀಟ್ನ್ನು ಜ್ಞಾಪಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಫಲಿತಾಂಶದಲ್ಲಿ ಮೊದಲು ಬಿಜೆಪಿ ನೂರಕ್ಕೂ ಹೆಚ್ಚು ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದ ವೇಳೆ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಿದ ಬಳಿಕ ದೇಶವು ಚುನಾವಣಾ ತಂತ್ರಜ್ಞನನ್ನ ಕಳೆದುಕೊಳ್ಳೋದನ್ನ ನಾವು ನೋಡಲಿದ್ದೇವೆ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಹೇಳಿದ್ದರು. ಆದರೆ ಇದೀಗ ಬಿಜೆಪಿಯು ಎರಡಂಕಿ ದಾಟುವಲ್ಲಿ ವಿಫಲವಾಗಿದ್ದು ಪ್ರಶಾಂತ್ ಕಿಶೋರ್ರ ಈ ಭವಿಷ್ಯ ನಿಜವಾಗಿದೆ ಎಂದು ಅನೇಕರು ಹಾಡಿ ಹೊಗಳಿದ್ದಾರೆ. ಆದರೆ ಟಿಎಂಸಿಯ ವಿಜಯಕ್ಕೆ ಕಾರಣರಾದ ಪ್ರಶಾಂತ್ ಕಿಶೋರ್ ಚುನಾವಣ ತಂತ್ರಜ್ಞ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಪ್ರಶಾಂತ್ ಕಿಶೋರ್, ನಾನು ಈಗ ಮಾಡುತ್ತಿರುವ ಕೆಲಸದಲ್ಲಿ ನನಗೆ ಮುಂದುವರಿಯಲು ಇಷ್ಟವಿಲ್ಲ. ನಾನು ಸಾಕಷ್ಟು ಮಾಡಿದ್ದೇನೆ. ಇದೀಗ ನಾನು ವಿರಾಮ ಪಡೆಯಲು ನಿರ್ಧರಿಸಿದ್ದೇನೆ. ಹೀಗಾಗಿ ನಾನು ಈ ಜಾಗದಿಂದ ನಿರ್ಗಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ. #PrashantKishor after getting his less than 100 seats prediction bang on pic.twitter.com/cx0XVPUHvJ — Azhar Jafri (@zhr_jafri) May 2, 2021 https://twitter.com/i/status/1388774199007846401