alex Certify ಈ ರೀತಿ ಬೆನ್ನು ತುರಿಸಿಕೊಂಡಿರುವುದನ್ನು ಜೀವಮಾನದಲ್ಲೇ ನೋಡಿರಲಾರಿರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೀತಿ ಬೆನ್ನು ತುರಿಸಿಕೊಂಡಿರುವುದನ್ನು ಜೀವಮಾನದಲ್ಲೇ ನೋಡಿರಲಾರಿರಿ…!

ಚಂದ್ರನ ಅಂಗಳಕ್ಕೇ ಕಾಲಿಟ್ಟ ಮನುಷ್ಯನಿಗೆ ಇನ್ನು ತನ್ನ ಬೆನ್ನನ್ನ ತಾನೇ ನೋಡಿಕೊಳ್ಳೋಕೆ ಸಾಧ್ಯವಾಗಿಲ್ಲ. ತಮಾಷೆ ವಿಚಾರ ಎನಿಸಿದ್ರೂ ಸಹ ಬೆನ್ನು ತುರಿಸಿಕೊಳ್ಳೋದು ಒಂದು ಕಷ್ಟದ ಕೆಲಸವೇ ಅನ್ನೋದನ್ನ ನೀವು ಒಪ್ಪಲೇಬೇಕು.

ಅಂದಹಾಗೆ ಈ ವಿಚಾರವನ್ನ ಹೇಳೋಕೆ ಕಾರಣವಿದೆ. ಇದೇ ರೀತಿ ಬೆನ್ನು ತುರಿಕೆ ಕಾಣಿಸಿಕೊಂಡಿದ್ದಕ್ಕೆ ಇಲ್ಲೊಬ್ಬ ಭೂಪ ಜೆಸಿಬಿಯ ನೆರವನ್ನ ಪಡೆದುಕೊಂಡಿದ್ದಾನೆ.

ಫೇಸ್ ಬುಕ್ನಲ್ಲಿ ಇಂತಹದ್ದೊಂದು ಕಾಮಿಡಿ ವಿಡಿಯೋ ಸಖತ್​ ವೈರಲ್​ ಆಗಿದೆ. 41 ಸೆಕೆಂಡ್​ ಇರೋ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಟ್ಟಡ ಕಾಮಗಾರಿ ಕೆಲಸ ನಡೀತಾ ಇದ್ದ ಸ್ಥಳದಲ್ಲಿ ನಿಂತಿರ್ತಾನೆ. ಅವನಿಗೆ ಬೆನ್ನು ತುರಿಕೆ ಕಾಣಿಸಿಕೊಂಡಿದ್ರಿಂದ ಮೊದಲು ಬಟ್ಟೆಯನ್ನ ಬಳಸಿ ತುರಿಸಿಕೊಳ್ಳೋಕೆ ಯತ್ನಿಸಿದ್ದಾನೆ.

ಅದಾದ ಮೇಲೆ ಅಲ್ಲೇ ಜೆಸಿಬಿ ಎದುರು ಬೆನ್ನು ಹಾಕಿ ನಿಂತುಕೊಳ್ತಾನೆ. ಕೂಡಲೇ ಜೆಸಿಬಿ ಸ್ಟಾರ್ಟ್ ಮಾಡಿದ ಡ್ರೈವರ್​ ಜೆಸಿಬಿಯ ಅಗೆಯುವ ಸಾಧನದ ಮೂಲಕ ಬೆನ್ನು ತುರಿಸಿಕೊಳ್ತಾನೆ. ಆದರೆ ಇಂತಹ ವಿಡಿಯೋಗಳನ್ನ ನೋಡಿ ಈ ಪ್ರಯತ್ನಕ್ಕೆ ಕೈ ಹಾಕದಿರೋದೇ ಒಳಿತು. ಅಪ್ಪಿತಪ್ಪಿಯೂ ಇಂತಹ ದುಸ್ಸಾಹಸ ಮಾಡಲು ಹೋಗಬೇಡಿ.

https://www.facebook.com/abdulnasar.in/videos/257727322285477

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...