ಬೆಳ್ಳಂ ಬೆಳಗ್ಗೆ ಮಾರುಕಟ್ಟೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನ ಇರಿದು ಕೊಲೆ ಮಾಡಿದ್ದು ಈ ಆಘಾತಕಾರಿ ದೃಶ್ಯ ಸಾರ್ವಜನಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಾಯುವ್ಯ ದೆಹಲಿಯ ಬುದ್ಧ ವಿಹಾರದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಪತಿ ತನ್ನ ಪತ್ನಿಗೆ ಇರಿದಿದ್ದಾನೆ. ಪ್ರತ್ಯಕ್ಷದರ್ಶಿಗಳ ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಆತ 25 ಬಾರಿಗೆ ತನ್ನ ಪತ್ನಿಗೆ ಇರಿದು ಕೊಲೆ ಮಾಡಿದ್ದಾನೆ.
26 ವರ್ಷದ ಪತ್ನಿಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಪತಿ ಈ ಕೆಲಸ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲಿ ನೆರೆದಿದ್ದ ಕೆಲವರು ಆತನನ್ನ ತಡೆಯಲು ಯತ್ನಿಸಿದ್ರೂ ಸಹ ಆರೋಪಿ ಅವರಿಗೆಲ್ಲ ಆವಾಜ್ ಹಾಕಿದ್ದಾನೆ. ಹೀಗಾಗಿ ಎಲ್ಲರೂ ತಮ್ಮ ಕ್ಯಾಮರಾದಲ್ಲಿ ದೃಶ್ಯ ಚಿತ್ರೀಕರಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ. ಮ್ಯಾರೇಜ್ ಬ್ಯುರೋದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಈಗ ಬಂಧಿಸಿದ್ದಾರೆ.