alex Certify ಸಾರ್ವಜನಿಕರ ʼಮೊಬೈಲ್ʼ‌ ನಲ್ಲಿ ಸೆರೆಯಾಯ್ತು ಹಾಡಹಗಲಲ್ಲೇ ನಡೆದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರ ʼಮೊಬೈಲ್ʼ‌ ನಲ್ಲಿ ಸೆರೆಯಾಯ್ತು ಹಾಡಹಗಲಲ್ಲೇ ನಡೆದ ಘೋರ ಕೃತ್ಯ

ಬೆಳ್ಳಂ ಬೆಳಗ್ಗೆ ಮಾರುಕಟ್ಟೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನ ಇರಿದು ಕೊಲೆ ಮಾಡಿದ್ದು ಈ ಆಘಾತಕಾರಿ ದೃಶ್ಯ ಸಾರ್ವಜನಿಕರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಾಯುವ್ಯ ದೆಹಲಿಯ ಬುದ್ಧ ವಿಹಾರದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಪತಿ ತನ್ನ ಪತ್ನಿಗೆ ಇರಿದಿದ್ದಾನೆ. ಪ್ರತ್ಯಕ್ಷದರ್ಶಿಗಳ ಮೊಬೈಲ್​ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಆತ 25 ಬಾರಿಗೆ ತನ್ನ ಪತ್ನಿಗೆ ಇರಿದು ಕೊಲೆ ಮಾಡಿದ್ದಾನೆ.

26 ವರ್ಷದ ಪತ್ನಿಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಪತಿ ಈ ಕೆಲಸ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲಿ ನೆರೆದಿದ್ದ ಕೆಲವರು ಆತನನ್ನ ತಡೆಯಲು ಯತ್ನಿಸಿದ್ರೂ ಸಹ ಆರೋಪಿ ಅವರಿಗೆಲ್ಲ ಆವಾಜ್​ ಹಾಕಿದ್ದಾನೆ. ಹೀಗಾಗಿ ಎಲ್ಲರೂ ತಮ್ಮ ಕ್ಯಾಮರಾದಲ್ಲಿ ದೃಶ್ಯ ಚಿತ್ರೀಕರಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ. ಮ್ಯಾರೇಜ್​ ಬ್ಯುರೋದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಈಗ ಬಂಧಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...