42 ವರ್ಷದ ವ್ಯಕ್ತಿಯೊಬ್ಬ ತನ್ನ ಕಾರನ್ನ ಸೀದಾ ಪೊಲೀಸ್ ಪಿಕೆಟ್ನೊಳಕ್ಕೆ ನುಗ್ಗಿಸಿದ ಪರಿಣಾಮ ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆ ದೆಹಲಿಯ ವಸಂತ ವಿಹಾರ ಏರಿಯಾದಲ್ಲಿ ನಡೆದಿದೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅಲ್ ಕೌಸರ್ ಪಿಕೆಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರು ಚಾಲಕ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಪತ್ನಿಯನ್ನ ಭೇಟಿಯಾಗಿ ಆತಂಕದಲ್ಲಿ ಹಿಂದಿರುಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಪೊಲೀಸ್ ಪೇದೆಯನ್ನ 57 ವರ್ಷದ ಮುನ್ಶಿಲಾಲ್ ಎಂದು ಗುರುತಿಸಲಾಗಿದೆ.
ಉಚಿತ ಆಮ್ಲಜನಕ ಪೂರೈಕೆಗಾಗಿ ಪತ್ನಿಯ ಆಭರಣವನ್ನೇ ಮಾರಿದ ಪತಿ
ಲಾಕ್ಡೌನ್ ವೇಳೆ ನಿಗಾ ಇಡುವ ಸಲುವಾಗಿ ಪೊಲೀಸರು ನಿರ್ಮಿಸಿಕೊಂಡಿದ್ದ ಪಿಕೆಟ್ನೊಳಕ್ಕೆ ನುಗ್ಗಿದ ಹೋಂಡಾ ಆರ್ಸಿವಿ ಕಾರು ಲಾಲ್ರನ್ನ 30 ರಿಂದ 40 ಮೀಟರ್ ದೂರಕ್ಕೆ ಎಳೆದೊಯ್ದಿದೆ ಎಂದು ಉಪ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ಹೇಳಿದ್ರು.
ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಪೇದೆಯನ್ನ ಏಮ್ಸ್ ಅಪಘಾತ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲಾಲ್ ಮೃತಪಟ್ಟಿದ್ದಾರೆ.
ಐಟಿ ಕ್ಷೇತ್ರದ ಉದ್ಯೋಗಿಯಾಗಿರುವ ಮುನಿರ್ಕಾ ನಿವಾಸಿ ಯಾದವ್ರನ್ನ ಪೊಲೀಸರು ಬಂಧಿಸಿದ್ದಾರೆ. ಗುರುಂಗಾವ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ಪತ್ನಿಯನ್ನ ಭೇಟಿಯಾಗಿ ವಾಪಸ್ಸಾಗುತ್ತಿದ್ದ ವೇಳೆ ನಿದ್ದೆ ಮಂಪರು ಆವರಿಸಿದ್ದರಿಂದ ಈ ಅವಘಡ ಉಂಟಾಗಿದೆ ಎಂದು ಯಾದವ್ ಹೇಳಿದ್ದಾರೆ . ಯಾದವ್ರನ್ನ ವಸಂತ ನಗರ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದ್ದು ಪಿಪಿಇ ಕಿಟ್ ನೀಡಿ ಐಸೋಲೇಷನ್ನಲ್ಲಿ ಇಡಲಾಗಿದೆ.