alex Certify ಪೊಲೀಸ್​​ ಪಿಕೆಟ್​ನಲ್ಲಿ ಕಾರು ನುಗ್ಗಿಸಿದ ಪರಿಣಾಮ ಕಾನ್ಸ್​ಟೇಬಲ್​ ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​​ ಪಿಕೆಟ್​ನಲ್ಲಿ ಕಾರು ನುಗ್ಗಿಸಿದ ಪರಿಣಾಮ ಕಾನ್ಸ್​ಟೇಬಲ್​ ಸಾವು..!

42 ವರ್ಷದ ವ್ಯಕ್ತಿಯೊಬ್ಬ ತನ್ನ ಕಾರನ್ನ ಸೀದಾ ಪೊಲೀಸ್​ ಪಿಕೆಟ್​ನೊಳಕ್ಕೆ ನುಗ್ಗಿಸಿದ ಪರಿಣಾಮ ಪೊಲೀಸ್​ ಪೇದೆ ಸಾವನ್ನಪ್ಪಿದ ಘಟನೆ ದೆಹಲಿಯ ವಸಂತ ವಿಹಾರ ಏರಿಯಾದಲ್ಲಿ ನಡೆದಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅಲ್​ ಕೌಸರ್​ ಪಿಕೆಟ್​ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರು ಚಾಲಕ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿತ ಪತ್ನಿಯನ್ನ ಭೇಟಿಯಾಗಿ ಆತಂಕದಲ್ಲಿ ಹಿಂದಿರುಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಪೊಲೀಸ್​ ಪೇದೆಯನ್ನ 57 ವರ್ಷದ ಮುನ್ಶಿಲಾಲ್​ ಎಂದು ಗುರುತಿಸಲಾಗಿದೆ.

ಉಚಿತ ಆಮ್ಲಜನಕ ಪೂರೈಕೆಗಾಗಿ ಪತ್ನಿಯ ಆಭರಣವನ್ನೇ ಮಾರಿದ ಪತಿ

ಲಾಕ್​ಡೌನ್​ ವೇಳೆ ನಿಗಾ ಇಡುವ ಸಲುವಾಗಿ ಪೊಲೀಸರು ನಿರ್ಮಿಸಿಕೊಂಡಿದ್ದ ಪಿಕೆಟ್​ನೊಳಕ್ಕೆ ನುಗ್ಗಿದ ಹೋಂಡಾ ಆರ್​ಸಿವಿ ಕಾರು ಲಾಲ್​ರನ್ನ 30 ರಿಂದ 40 ಮೀಟರ್​ ದೂರಕ್ಕೆ ಎಳೆದೊಯ್ದಿದೆ ಎಂದು ಉಪ ಪೊಲೀಸ್​ ಆಯುಕ್ತ ಪ್ರತಾಪ್​ ಸಿಂಗ್​ ಹೇಳಿದ್ರು.

ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್​ ಪೇದೆಯನ್ನ ಏಮ್ಸ್ ಅಪಘಾತ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲಾಲ್​ ಮೃತಪಟ್ಟಿದ್ದಾರೆ.

ಐಟಿ ಕ್ಷೇತ್ರದ ಉದ್ಯೋಗಿಯಾಗಿರುವ ಮುನಿರ್ಕಾ ನಿವಾಸಿ ಯಾದವ್​ರನ್ನ ಪೊಲೀಸರು ಬಂಧಿಸಿದ್ದಾರೆ. ಗುರುಂಗಾವ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ಪತ್ನಿಯನ್ನ ಭೇಟಿಯಾಗಿ ವಾಪಸ್ಸಾಗುತ್ತಿದ್ದ ವೇಳೆ ನಿದ್ದೆ ಮಂಪರು ಆವರಿಸಿದ್ದರಿಂದ ಈ ಅವಘಡ ಉಂಟಾಗಿದೆ ಎಂದು ಯಾದವ್​ ಹೇಳಿದ್ದಾರೆ . ಯಾದವ್​​ರನ್ನ ವಸಂತ ನಗರ ಪೊಲೀಸ್​ ಠಾಣೆಗೆ ಕೊಂಡೊಯ್ಯಲಾಗಿದ್ದು ಪಿಪಿಇ ಕಿಟ್​ ನೀಡಿ ಐಸೋಲೇಷನ್​ನಲ್ಲಿ ಇಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...