alex Certify ಗಿಳಿ ಸತ್ತ ಬಳಿಕವೂ ಮೊಟ್ಟೆಯಿಂದ ಹೊರ ಬಂತು ಮರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿಳಿ ಸತ್ತ ಬಳಿಕವೂ ಮೊಟ್ಟೆಯಿಂದ ಹೊರ ಬಂತು ಮರಿ…!

ತಾಯಿ ಹಕ್ಕಿ ಕಾವು ಕೊಡದೇ ಮೊಟ್ಟೆ ಮರಿಯಾಗದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಪಕ್ಷಿ ಪ್ರಿಯನೊಬ್ಬ ತಾಯಿ ಪಕ್ಷಿ ಸತ್ತು ಹೋದರೂ ಅದರ ಮೊಟ್ಟೆಯಿಂದ ಮರಿ ಮಾಡಿ ಸಾಕಿದ್ದಾನೆ. ಅದರ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಮೊಟ್ಟೆಯಿಂದ ಮರಿ ಹೊರ ತೆಗೆಯುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋವನ್ನು 32 ಸಾವಿರಕ್ಕೂ ಅಧಿಕ ಜನ ಇಷ್ಟ ಪಟ್ಟಿದ್ದು, 9 ಸಾವಿರ ಜನ ರೀ ಟ್ವೀಟರ್ ಮಾಡಿದ್ದಾರೆ.

ಮೊಟ್ಟೆಯಿಂದ ಮರಿಯನ್ನು ಸಣ್ಣ ಚಿಮಡಿಯಿಂದ ನಿಧಾನವಾಗಿ ಹೊರ ತೆಗೆದು ಅದನ್ನು ಒಂದು ಬೌಲ್‌ನಲ್ಲಿ ಹಾಕಿ, ನಿಯಮಿತ ಉಷ್ಣಾಂಶದಲ್ಲಿ ಇರಿಸಿ ಅದಕ್ಕೆ ಅಷ್ಟೇ ಉಷ್ಣಾಂಶದ ಆಹಾರ ತಿನ್ನಿಸಿ ಹಂತ ಹಂತವಾಗಿ ಬೆಳೆಸುವ ಸುಮಾರು ತಿಂಗಳ ಪ್ರಕ್ರಿಯೆಯ ವಿಡಿಯೋವನ್ನು 2.20 ನಿಮಿಷದಲ್ಲಿ ಮಾಡಿ ತೋರಿಸಲಾಗಿದೆ. ಒಂದು ಸಣ್ಣ ಹುಳುವಿನ ಗಾತ್ರದ ಮರಿ ಅಂಗೈಯ್ಯಗಲ ಬೆಳೆದು ದೊಡ್ಡದಾಗುವ ಅಚ್ಚರಿಯ ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...