ಕೋವಿಡ್-19ಗೆ ಮದ್ದು ಎಂದು ಹೇಳಿಕೊಂಡು ವಿಷಪೂರಿತ ಹಾವೊಂದನ್ನು ಕೊಂದು ತಿನ್ನಲು ಮುಂದಾದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದಾರೆ.
ತಿರುನೆಲ್ವೇಲಿ ಜಿಲ್ಲೆಯ ಪೆರುಮಾಳ್‌ಪಟ್ಟಿ ಎಂಬ ಊರಿನ ನಿವಾಸಿಯಾದ 50ರ ಹರೆಯದ ವಡಿವೇಲ್ ಎಂಬ ಈತ ಕೋವಿಡ್-19ಗೆ ಹಾವಿನ ಮಾಂಸ ಉತ್ತಮ ಔಷಧ ಎಂದು ಹೇಳಿಕೊಂಡಿದ್ದ. ಪ್ರಾಣಿಗೆ ಜೀವ ಹಾನಿ ಮಾಡಿದ ಕಾರಣಕ್ಕೆ 7,500 ರೂ.ಗಳನ್ನು ದಂಡದ ರೂಪದಲ್ಲಿ ಈಗ ಕಟ್ಟಬೇಕಾಗಿ ಬಂದಿದೆ.
12ರಿಂದ 15 ವಯಸ್ಸಿನವರಿಗೆ ಫೈಜರ್ ಲಸಿಕೆ ನೀಡಲು ಅನುಮತಿ
ಈತ ಕಟ್ಟಿನ ಹಾವನ್ನು ಕೊಂದಿದ್ದು ಅದರ ದೇಹವು ಮೋರಿಯೊಂದರಲ್ಲಿ ಸಿಕ್ಕಿದೆ ಎಂದು ಮದುರೈ ಜಿಲ್ಲಾ ಅರಣ್ಯಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ.
ಡಿಜಿಟಲೀಕರಣಗೊಳ್ಳಲಿದೆ ಶ್ರೀರಂಗಂ ದೇವಸ್ಥಾನದ ತಾಳೆ ಗರಿ
ಈ ಕೆಲಸ ಮಾಡುವ ಅವಧಿಯಲ್ಲಿ ವಡಿವೇಲ್ ಕುಡಿತದ ಅಮಲಿನಲ್ಲಿದ್ದು, ಆತನಿಗೆ ಹೀಗೆ ಮಾಡಲು ಸುತ್ತಲಿದ್ದ ಜನರು ಪ್ರೇರಣೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಈ ವ್ಯಕ್ತಿ ಹಾವಿನ ವಿಷದ ಗ್ರಂಥಿಗಳನ್ನು ಕಚ್ಚಿರದೇ ಇದ್ದ ಕಾರಣ ಬದುಕುಳಿದಿದ್ದಾನೆ.