alex Certify ಶಾಕಿಂಗ್​: ಬರೋಬ್ಬರಿ 36 ವರ್ಷಗಳಿಂದ ಈತನ ಮುಖದ ಒಳಗಿತ್ತು ಗಾಜಿನ ಚೂರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಬರೋಬ್ಬರಿ 36 ವರ್ಷಗಳಿಂದ ಈತನ ಮುಖದ ಒಳಗಿತ್ತು ಗಾಜಿನ ಚೂರು…!

Man Gets Tests Done as Face Swells, Finds Glass Bits Stuck in Accident 36  Years Agoಮುಖದಲ್ಲಿ ಊತ ಬಂದಿದೆ ಎಂಬ ಕಾರಣಕ್ಕೆ ಮೆಡಿಸಿನ್​ ಮಾಡುತ್ತಿದ್ದ ತಮಿಳುನಾಡಿನ ವ್ಯಕ್ತಿ ಡಾಕ್ಟರ್​ ನೀಡಿದ ಮಾಹಿತಿ ಕೇಳಿ ಶಾಕ್​ ಆಗಿದ್ದಾರೆ. ಮೆಡಿಕಲ್​ ಟೆಸ್ಟ್​ ವೇಳೆ ಈ ವ್ಯಕ್ತಿ 36 ವರ್ಷದ ಹಿಂದೆ ಆದ ಅಪಘಾತದಲ್ಲಿ ಮುಖಕ್ಕೆ ಹೊಕ್ಕಿದ್ದ ಗಾಜು ಈ ಊತಕ್ಕೆ ಕಾರಣ ಎಂಬ ವಿಚಿತ್ರ ಅಂಶ ಹೊರಬಿದ್ದಿದೆ.

ಆರ್​. ಸಿ. ಸುಬ್ರಮಣಿಯಮ್​ ಎಂಬವರ ಕಣ್ಣಿನ ಕೆಳಗಿನ ಭಾಗದಲ್ಲಿ ಊತ ಶುರುವಾಗಿತ್ತು. ಈ ವರ್ಷದ ಅಕ್ಟೋಬರ್​ ತಿಂಗಳಲ್ಲಿ ಸಮಸ್ಯೆಗೆ ಸಿಲುಕಿದ್ದ ಸುಬ್ರಮಣಿಯಮ್​ ವೈದ್ಯರ ಬಳಿ ಹೋಗಿದ್ದಾರೆ. ಈ ವೇಳೆ ವೈದ್ಯರು ಕೆಲ ವೈದ್ಯಕೀಯ ಟೆಸ್ಟ್​ಗೆ ಒಳಗಾಗುವಂತೆ ಸೂಚನೆ ನೀಡಿದ್ದಾರೆ.

ಆದರೆ ವೈದ್ಯಕೀಯ ಪರೀಕ್ಷೆ ವೇಳೆ ಆತನ ಮುಖದ ಒಳಗೆ ಗಾಜಿನ ತುಂಡುಗಳಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಮೂರು ದಶಕಗಳಿಂದ ಆ ಗಾಜು ಚರ್ಮದ ಒಳಗೆ ಇದ್ದಿದ್ದರಿಂದ ಈ ನೋವು ವಾಸಿಯೇ ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಸುಬ್ರಮಣಿಯನ್​ 20 ವರ್ಷ ವಯಸ್ಸಿನವರಾಗಿದ್ದಾಗ ಕಾರಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಅವರ ಮುಖಕ್ಕೆ ಗಾಜುಗಳು ಸಿಲುಕಿಕೊಂಡಿದ್ದವು. ಈ ಘಟನೆ ನಡೆದ 36 ವರ್ಷದ ಬಳಿಕ ಇದೀಗ ಈ ವಿಚಿತ್ರ ವಿಚಾರ ಬೆಳಕಿಗೆ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...