ರೈಲಿನಲ್ಲಿ ಪ್ರಯಾಣ ಮಾಡುವಾಗ ಲಗೇಜು, ಮೊಬೈಲ್ ಫೋನುಗಳು, ಲ್ಯಾಪ್ಟಾಪ್‌ಗಳು ಹಾಗೂ ಇತರ ವಸ್ತುಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಹಳಷ್ಟು ಬಾರಿ ಕಳ್ಳತನ/ಕಳುವಾದ ಈ ವಸ್ತುಗಳು ಸಿಗುವುದು ಬಹಳ ಕಷ್ಟ. ಆದರೆ ಇಲ್ಲೊಂದಷ್ಟು ಜನರಿಗೆ ಹೀಗೆ ಕಳುವಾದ ವಸ್ತುಗಳು ಮರಳಿ ಸಿಕ್ಕಿವೆ.
ಮುಂಬೈನಲ್ಲಿ ರೈಲ್ವೇ ಪೊಲೀಸರು ತಾವು ವಶಪಡಿಸಿಕೊಂಡ ಕಳುವಾದ ಲ್ಯಾಪ್ಟಾಪ್‌ಗಳು, ಫೋನ್‌ಗಳು ಹಾಗೂ ನಗದನ್ನು ಅದರ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು 14 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಹೀಗೆ ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ.
2ನೇ ಮದುವೆ ವಿರೋಧಿಸಿದ್ದಕ್ಕೆ ವಿದ್ಯುತ್ ಕಂಬವನ್ನೇರಿದ ವೃದ್ಧ…!
34 ಪ್ರಯಾಣಿಕರಿಗೆ ಕಳುವಾದ ವಸ್ತುಗಳು ಸಿಕ್ಕಿವೆ. ನಿವೃತ್ತ ಉದ್ಯಮಿ ಸುರೇಶ್ ಸವಾಲಿಯಾ ಅವರಿಗೆ 22 ಗ್ರಾಂ ಚಿನ್ನದ ಸರವೊಂದು ಮರಳಿ ಸಿಕ್ಕಿದೆ. 14 ವರ್ಷಗಳ ಹಿಂದೆ ಕಳುವಾಗಿದ್ದ ಈ ಒಡವೆಯನ್ನು ಪೊಲೀಸರು ಸವಾಲಿಯಾಗೆ ಹಿಂದಿರುಗಿಸಿದ್ದಾರೆ. ಕದ್ದವರು ಈ ಸರವನ್ನು ಕರಗಿಸಿ ಬಿಸ್ಕೆಟ್ ಮಾಡಿದ್ದಾರೆ ಎಂದುಕೊಂಡಿದ್ದ ಸವಾಲಿಯಾರಿಗೆ ಇಷ್ಟು ವರ್ಷಗಳ ಬಳಿಕ ಸರ ಸಿಕ್ಕಿದ್ದು ಬಹಳ ಸಂತಸಕ್ಕೆ ಕಾರಣವಾಗಿದೆ.