alex Certify ಸೊಸೆಯೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಹರಿಬಿಟ್ಟ ಕಿರಾತಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಸೆಯೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಹರಿಬಿಟ್ಟ ಕಿರಾತಕ

ಗುಜರಾತ್ ನ ಸೂರತ್ ನಲ್ಲಿ ಸೊಸೆಯೊಂದಿಗೆ ಸಂಬಂಧ ಬೆಳೆಸಿದ ಅಂಕಲ್ ಆಕೆಯ ತಂದೆಗೆ ವಿಡಿಯೋ ಸೆಂಡ್ ಮಾಡಿದ್ದಾನೆ. ಮದುವೆಯ ನಂತರ ಅಕ್ರಮ ಸಂಬಂಧ ಮುಂದುವರೆಸುವಂತೆ ಬಲವಂತ ಮಾಡಿದ್ದಾನೆ.

ಸೌರಾಷ್ಟ್ರ ಮೂಲದ ಯುವತಿ ಸೂರತ್ ಪುನಾ ಪ್ರದೇಶದಲ್ಲಿ ವಾಸವಾಗಿದ್ದು, ಸೀರೆಗಳಿಗೆ ಫಾಲ್ಸ್ ಲೇಸ್ ವರ್ಕ್ ಮಾಡುವ ಕೆಲಸ ಮಾಡಿಕೊಂಡಿದ್ದಾಳೆ. ಈ ಕೆಲಸವನ್ನು ಆಕೆಯ 30 ವರ್ಷದ ಚಿಕ್ಕಪ್ಪ ಕಲಿಸಿ ಕೊಟ್ಟಿದ್ದಾನೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಆರೋಪಿ, ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದು ಖಾಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.

ಈ ನಡುವೆ ಮನೆಯಲ್ಲಿ ಯುವತಿಗೆ ಮದುವೆ ಮಾಡಲು ಮುಂದಾಗುತ್ತಿದ್ದಂತೆ ಮದುವೆ ನಂತರವೂ ಸಂಬಂಧ ಮುಂದುವರಿಸಲು ಬಲವಂತ ಮಾಡಿದ್ದಾನೆ. ಇದಕ್ಕೆ ನಿರಾಕರಿಸಿದಾಗ ವಿಡಿಯೋವನ್ನು ಯುವತಿಯ ತಂದೆಗೆ ಮತ್ತು ಸಮುದಾಯದ ಕೆಲವು ಜನರೊಂದಿಗೆ ಹಂಚಿಕೊಂಡಿದ್ದಾನೆ. ಪುನಾ ಏರಿಯಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...