
ಕವಿ ಪುನೀತ್ ಶರ್ಮಾ ಈ 34 ಸೆಕೆಂಡ್ನ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ 54 ಸಾವಿರಕ್ಕಿಂತಲೂ ಹೆಚ್ಚು ವೀವ್ಸ್ಗಳನ್ನ ಕೆಲವೇ ಗಂಟೆಗಳಲ್ಲಿ ಸಂಪಾದಿಸಿದೆ.
ಈ ವಿಡಿಯೋದಲ್ಲಿ ಬೆಚ್ಚನೆಯ ಉಡುಗೆ ಧರಿಸಿದ್ದ ವ್ಯಕ್ತಿಯೊಬ್ಬ ಮನಾಲಿಯ ಮಾಲ್ ರಸ್ತೆಯಲ್ಲಿ ರೌಂಡ್ಸ್ ಹಾಕ್ತಿರೋದನ್ನ ಕಾಣಬಹುದಾಗಿದೆ. ತಾನೇ ಸೆಲ್ಫೀ ವಿಡಿಯೋ ಮಾಡ್ತಾ ಚಹವನ್ನ ಸವಿಯುತ್ತ ಆತ ಹಿಮಾಚಲ ಪ್ರದೇಶದ ಹಿಮಮಳೆಯನ್ನ ಎಂಜಾಯ್ ಮಾಡಿದ್ದಾನೆ.