alex Certify ಎನರ್ಜಿ ಡ್ರಿಂಕ್​ ಬಳಸಿ ತಯಾರಾಯ್ತು ಪಾಸ್ತಾ…! ವಿಚಿತ್ರ ರೆಸಿಪಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎನರ್ಜಿ ಡ್ರಿಂಕ್​ ಬಳಸಿ ತಯಾರಾಯ್ತು ಪಾಸ್ತಾ…! ವಿಚಿತ್ರ ರೆಸಿಪಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಬಗೆಯ ತಿನಿಸುಗಳ ತಯಾರಿಕೆಯ ವಿಡಿಯೋಗಳಿಗೇನು ಬರವಿಲ್ಲ. ರೊಚರ್​ ಫೆರಾರೆ ಮಂಚೂರಿಯನ್​ನಿಂದ ಹಿಡಿದು ನ್ಯುಟೆಲ್ಲಾ ಬಿರಿಯಾನಿವರೆಗೆ ಅಸಾಮಾನ್ಯ ಆಹಾರಗಳನ್ನ ಕೆಲ ಪಾಕ ಪಂಡಿತರು ತೋರಿಸಿಬಿಟ್ಟಿದ್ದಾರೆ. ಇದೀಗ ಈ ಸಾಲಿಗೆ ಇನ್ನೊಂದು ವಿಚಿತ್ರ ತಿಂಡಿ ಸೇರ್ಪಡೆಯಾಗಿದೆ. ಅದುವೇ ಎನರ್ಜಿ ಡ್ರಿಂಕ್ ಪಾಸ್ತಾ..!

ಕುದಿಯುತ್ತಿರುವ ಎನರ್ಜಿ ಡ್ರಿಂಕ್​ಗೆ ಪಾಸ್ತಾವನ್ನ ಹಾಕಿ ತಿಂಡಿ ರೆಡಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನ ಅಮೆರಿಕದ ಜಸ್ಟಿನ್​ ಫ್ಲೋಮ್​ ಎಂಬವರು ಪೋಸ್ಟ್ ಮಾಡಿದ್ದಾರೆ.

ಒಬ್ಬ ವ್ಯಕ್ತಿ ಪಾತ್ರೆಗೆ ಎನರ್ಜಿ ಡ್ರಿಂಕ್​ನ್ನು ಸುರಿಯುತ್ತಾನೆ. ಆ ಎನರ್ಜಿ ಡ್ರಿಂಕ್​ ಕುದಿಯಲು ಆರಂಭಿಸುತ್ತಿದ್ದಂತೆಯೇ ಅದಕ್ಕೆ ಪಾಸ್ತಾವನ್ನ ಹಾಕುತ್ತಾನೆ. ಬಳಿಕ ಆ ಪಾಸ್ತಾವನ್ನ ತಟ್ಟೆಗೆ ಶಿಫ್ಟ್ ಮಾಡುತ್ತಾನೆ. ನಂತರ ಪಾತ್ರೆಯಲ್ಲಿ ಎನರ್ಜಿ ಡ್ರಿಂಕ್ ಹಾಗೂ ಹಿಟ್ಟನ್ನ ಮಿಶ್ರಣ ಮಾಡುತ್ತಾನೆ. ಅದು ಪೇಸ್ಟ್ ರೀತಿ ಆದ ಬಳಿಕ ಪಾಸ್ತಾ ಮೇಲೆ ಸುರಿಯುತ್ತಾನೆ. ಇದು ಸಾಲದು ಎಂಬಂತೆ ಪಾಸ್ತಾ ಅಲಂಕಾರಕ್ಕೆ ಉಪ್ಪಿನಕಾಯಿಯನ್ನೂ ಬಳಕೆ ಮಾಡಿಕೊಂಡಿದ್ದಾನೆ.

ಈ ವಿಡಿಯೋ ಫೇಸ್​ಬುಕ್​ನಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಇದನ್ನ ಇಟಾಲಿಯನ್​ ತಿನಿಸಿನ ಕೊಲೆ ಎಂದು ಬಣ್ಣಿಸಿದ್ದಾರೆ. ಅಂದಹಾಗೆ ನೀವು ಮನೆಯಲ್ಲಿ ಇಂತಹ ಎನರ್ಜಿ ಡ್ರಿಂಕ್​ ಪಾಸ್ತಾ ತಯಾರು ಮಾಡ್ತೀರಾ..?

You will never eat pasta the same way AGAIN

You will never eat pasta the same way AGAINMy friend Tommy is brilliant! My and my family are gonna try this asap. wow!

Posted by Justin Flom on Sunday, January 3, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...