ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಬಗೆಯ ತಿನಿಸುಗಳ ತಯಾರಿಕೆಯ ವಿಡಿಯೋಗಳಿಗೇನು ಬರವಿಲ್ಲ. ರೊಚರ್ ಫೆರಾರೆ ಮಂಚೂರಿಯನ್ನಿಂದ ಹಿಡಿದು ನ್ಯುಟೆಲ್ಲಾ ಬಿರಿಯಾನಿವರೆಗೆ ಅಸಾಮಾನ್ಯ ಆಹಾರಗಳನ್ನ ಕೆಲ ಪಾಕ ಪಂಡಿತರು ತೋರಿಸಿಬಿಟ್ಟಿದ್ದಾರೆ. ಇದೀಗ ಈ ಸಾಲಿಗೆ ಇನ್ನೊಂದು ವಿಚಿತ್ರ ತಿಂಡಿ ಸೇರ್ಪಡೆಯಾಗಿದೆ. ಅದುವೇ ಎನರ್ಜಿ ಡ್ರಿಂಕ್ ಪಾಸ್ತಾ..!
ಕುದಿಯುತ್ತಿರುವ ಎನರ್ಜಿ ಡ್ರಿಂಕ್ಗೆ ಪಾಸ್ತಾವನ್ನ ಹಾಕಿ ತಿಂಡಿ ರೆಡಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋವನ್ನ ಅಮೆರಿಕದ ಜಸ್ಟಿನ್ ಫ್ಲೋಮ್ ಎಂಬವರು ಪೋಸ್ಟ್ ಮಾಡಿದ್ದಾರೆ.
ಒಬ್ಬ ವ್ಯಕ್ತಿ ಪಾತ್ರೆಗೆ ಎನರ್ಜಿ ಡ್ರಿಂಕ್ನ್ನು ಸುರಿಯುತ್ತಾನೆ. ಆ ಎನರ್ಜಿ ಡ್ರಿಂಕ್ ಕುದಿಯಲು ಆರಂಭಿಸುತ್ತಿದ್ದಂತೆಯೇ ಅದಕ್ಕೆ ಪಾಸ್ತಾವನ್ನ ಹಾಕುತ್ತಾನೆ. ಬಳಿಕ ಆ ಪಾಸ್ತಾವನ್ನ ತಟ್ಟೆಗೆ ಶಿಫ್ಟ್ ಮಾಡುತ್ತಾನೆ. ನಂತರ ಪಾತ್ರೆಯಲ್ಲಿ ಎನರ್ಜಿ ಡ್ರಿಂಕ್ ಹಾಗೂ ಹಿಟ್ಟನ್ನ ಮಿಶ್ರಣ ಮಾಡುತ್ತಾನೆ. ಅದು ಪೇಸ್ಟ್ ರೀತಿ ಆದ ಬಳಿಕ ಪಾಸ್ತಾ ಮೇಲೆ ಸುರಿಯುತ್ತಾನೆ. ಇದು ಸಾಲದು ಎಂಬಂತೆ ಪಾಸ್ತಾ ಅಲಂಕಾರಕ್ಕೆ ಉಪ್ಪಿನಕಾಯಿಯನ್ನೂ ಬಳಕೆ ಮಾಡಿಕೊಂಡಿದ್ದಾನೆ.
ಈ ವಿಡಿಯೋ ಫೇಸ್ಬುಕ್ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಇದನ್ನ ಇಟಾಲಿಯನ್ ತಿನಿಸಿನ ಕೊಲೆ ಎಂದು ಬಣ್ಣಿಸಿದ್ದಾರೆ. ಅಂದಹಾಗೆ ನೀವು ಮನೆಯಲ್ಲಿ ಇಂತಹ ಎನರ್ಜಿ ಡ್ರಿಂಕ್ ಪಾಸ್ತಾ ತಯಾರು ಮಾಡ್ತೀರಾ..?
https://www.facebook.com/justinflomofficial/videos/1043255119511910/?t=0