alex Certify ನೀರಾನೆಗೆ ಹಲ್ಲುಜ್ಜಿದ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಾನೆಗೆ ಹಲ್ಲುಜ್ಜಿದ ಭೂಪ….!

ವ್ಯಕ್ತಿಯೊಬ್ಬ ನೀರಾನೆಯೊಂದರ ಹಲ್ಲು ತಿಕ್ಕುವ ವಿಡಿಯೋ ಸಖತ್ ವೈರಲ್ ಆಗಿದೆ.
ನೇಚರ್ ಈಸ್ ಲಿಟ್ ಎಂಬ ಟ್ವಿಟರ್ ಖಾತೆಯಲ್ಲಿ 59 ಸೆಕೆಂಡ್ ನ ವಿಡಿಯೋ ಅಪ್ಲೋಡ್ ಆಗಿದ್ದು, 5.7 ಲಕ್ಷ ಜನ ವೀಕ್ಷಿಸಿದ್ದಾರೆ. 1 ಸಾವಿರಕ್ಕೂ ಅಧಿಕ ರೀ ಟ್ವೀಟ್ ಆಗಿದ್ದು, ಆರೂವರೆ ಸಾವಿರ ಜನ ಲೈಕ್ ಮಾಡಿದ್ದಾರೆ.

ಜಗತ್ತಿನ ಅತಿ ಅಪಾಯಕಾರಿ ಪ್ರಾಣಿ ಎಂದು ಕರೆಯುವ ನೀರಾನೆಯ ಬಾಯಿ ತೆರೆಸಿ ಹಲ್ಲು ತಿಕ್ಕುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಯಾವುದೋ ಪ್ರಾಣಿ ಸಂಗ್ರಹಾಲಯ ಅಥವಾ ನ್ಯಾಷನಲ್ ಪಾರ್ಕ್ ನಲ್ಲಿ ಈ ವಿಡಿಯೋ ಮಾಡಿದಂತಿದೆ ಎಂಬೆಲ್ಲ ಚರ್ಚೆಗಳು ಪ್ರಾರಂಭವಾಗಿವೆ.

ನೀಲಿ ಯೂನಿಫಾರ್ಮ್ ಹಾಕಿದ ವ್ಯಕ್ತಿ ಬರುತ್ತಿದ್ದಂತೆ ಮುಳುಗಿದ ನೀರಾನೆ ಎದ್ದು ಬಂದು ತನ್ನ ದೊಡ್ಡ ಬಾಯಿ ತೆರೆಯುತ್ತದೆ. ಆತ ಸ್ವಲ್ಪವೂ ಭಯವಿಲ್ಲದೆ ಗುಹೆಯಂಥ ಬಾಯಿಯಲ್ಲಿ ಕೈ ಹಾಕಿ ಬ್ರಷ್ ನಿಂದ ನೀರಾನೆಯ ಹಲ್ಲು ಹಾಗೂ ಇಡೀ ಬಾಯಿಯನ್ನು ಸ್ವಚ್ಛ ಮಾಡುತ್ತಾನೆ.‌
ಆತ ನೀರಾನೆಯ ಜೊತೆ ಸಾಧಿಸಿದ ಆಪ್ತತೆಯ ಬಗ್ಗೆ ನೆಟ್ಟಿಗರು ಚರ್ಚಿಸಿದ್ದಾರೆ.

https://twitter.com/NaturelsLit/status/1279269432531943424?ref_src=twsrc%5Etfw%7Ctwcamp%5Etweetembed%7Ctwterm%5E1279269432531943424%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fman-casually-brushes-hippos-teeth-netizens-love-animals-discipline-watch%2F616351

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...