alex Certify ಆನ್​ಲೈನ್​ ನಲ್ಲಿ ಐ ಫೋನ್​ ಬುಕ್​ ಮಾಡಿದವರಿಗೆ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್​ಲೈನ್​ ನಲ್ಲಿ ಐ ಫೋನ್​ ಬುಕ್​ ಮಾಡಿದವರಿಗೆ ಕಾದಿತ್ತು ಶಾಕ್​..!

ಹಬ್ಬಗಳ ಸೀಸನ್​ ಶುರುವಾಯ್ತು ಅಂದ್ರೆ ಸಾಕು ಆನ್​ಲೈನ್​ ಶಾಪಿಂಗ್​ ಮಾರುಕಟ್ಟೆಗಳು ಗ್ರಾಹಕರನ್ನ ಸೆಳೆಯೋಕೆ ಆಫರ್​ಗಳ ಸುರಿಮಳೆಯನ್ನೇ ಹರಿಸುತ್ತವೆ. ಆದರೆ ಕೊಲ್ಕತ್ತಾದ ವ್ಯಕ್ತಿಯೊಬ್ಬರಿಗೆ ಈ ಹಬ್ಬದ ಆಫರ್​ ದೊಡ್ಡ ಶಾಕ್​ ಅನ್ನೇ ನೀಡಿದೆ.

ಏರ್​ ಫೋರ್ಸ್​ ವಿಂಗ್​ ಕಮಾಂಡರ್​ ಆನ್​ಲೈನ್​ ಶಾಪಿಂಗ್ ಮೂಲಕ ಐಫೋನ್​ ಆರ್ಡರ್​ ಮಾಡಿದ್ರೆ ಅವರಿಗೆ ಸೋಪನ್ನ ಕಳಿಸುವ ಮೂಲಕ ಮಕ್ಮಲ್​ ಟೋಪಿ ಹಾಕಿದ್ದಾರೆ.

38 ವರ್ಷದ ವಿಂಗ್​ ಕಮಾಂಡರ್​ ಕೆಲ ದಿನಗಳ ಹಿಂದಷ್ಟೇ ಆನ್​ಲೈನ್​ ಮಾರುಕಟ್ಟೆಯಲ್ಲಿ ಐ ಫೋನ್​ ಒಂದನ್ನ ಬುಕ್​ ಮಾಡಿದ್ದರು. ಡೆಲಿವರಿ ಸ್ವೀಕರಿಸುತ್ತಿದ್ದಂತೆಯೇ ಬಾಕ್ಸ್ ಓಪನ್​ ಮಾಡಿದ ಅವರಿಗೆ ಭರ್ಜರಿ ಶಾಕ್​ ಒಂದು ಕಾದಿತ್ತು.

ಅದೇನಂದರೆ ಐ ಫೋನ್​ ಇರುವ ಜಾಗದಲ್ಲಿ ಸೋಪನ್ನ ಇಡಲಾಗಿತ್ತು. ಈ ವಂಚನೆಯಿಂದ ಆಘಾತಕ್ಕೊಳಗಾದ ಅವರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜನವರಿ 2ರಂದು ನಾನು 84,900 ರೂಪಾಯಿ ಹಣ ಖರ್ಚು ಮಾಡಿ ಐಫೋನ್​ 12 ಬುಕ್​ ಮಾಡಿದ್ದೇನೆ. ಕ್ರೆಡಿಟ್​ ಕಾರ್ಡ್​ನಲ್ಲಿ ನಾನು ಈ ಪೇಮೆಂಟ್ ಮಾಡಿದ್ದು ಆನ್​ಲೈನ್​ ಮಾರುಕಟ್ಟೆಯವರು ಮೊಬೈಲ್​ ಫೋನ್​ ಬದಲಾಗಿ ಸೋಪನ್ನ ಕಳುಹಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...