
ಮಾವಿನಹಣ್ಣಿನ ವಿಚಾರವಾಗಿ ಜಗಳ ನಡೆದು ಪತಿ ತನ್ನ ಪತ್ನಿಯನ್ನು ಬಡಿದು ಕೊಂದು ಹಾಕಿದ ಘಟನೆ ಒಡಿಶಾದ ಜಲ ಮುಂಡ ಗ್ರಾಮದಲ್ಲಿ ನಡೆದಿದೆ.
ಆರೋಪಿ ಕಾರ್ತಿಕ್ ಜನ ಎಂಬಾತ ತಡರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಆಗಮಿಸಿ ಮಾವಿನಹಣ್ಣು ಕೊಡುವಂತೆ ಪತ್ನಿಗೆ ಪೀಡಿಸಿದ್ದಾನೆ. ಆದರೆ ಮಕ್ಕಳು ಹಣ್ಣು ತಿಂದಿದ್ದಾರೆ ಎಂದು ಪತ್ನಿ ಉತ್ತರಿಸಿದರೂ ಸಮಾಧಾನಗೊಂಡಿಲ್ಲ. ಕೆರಳಿದ ಆರೋಪಿಯು ಬಿದಿರಿನ ಹಲಗೆಯಿಂದ ಆಕೆಗೆ ಮನಸೋ ಇಚ್ಛೆ ಭಾರಿಸಿದ್ದಾನೆ.
ಆಕೆ ಕಿರುಚಾಟ ದಿಂದ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಾಗ, ಮಹಿಳೆ ಪ್ರಜ್ಞಾ ಶೂನ್ಯವಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ಇಹಲೋಕ ತ್ಯಜಿಸಿದ್ದಳು.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಪ್ರಗತಿಯಲ್ಲಿದೆ