alex Certify ಅಪರಿಚಿತನ ಕರೆ ನಂಬಿದ್ದಕ್ಕೆ ಕ್ಷಣಾರ್ಧದಲ್ಲಿ 9 ಲಕ್ಷ ರೂ. ಮಂಗಮಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರಿಚಿತನ ಕರೆ ನಂಬಿದ್ದಕ್ಕೆ ಕ್ಷಣಾರ್ಧದಲ್ಲಿ 9 ಲಕ್ಷ ರೂ. ಮಂಗಮಾಯ

ಅಪರಿಚಿತ ಕರೆ ಮಾಡಿದ ವ್ಯಕ್ತಿಯೊಬ್ಬ ಹೇಳಿದ ಅಪ್ಲಿಕೇಶನ್​ ಡೌನ್​ಲೋಡ್ ಮಾಡಿದ ಕೂಡಲೇ ಬ್ಯಾಂಕ್​ ಖಾತೆಯಿಂದ 9 ಲಕ್ಷ ರೂಪಾಯಿ ಎಗರಿಸಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಕರೆ ಸ್ವೀಕರಿಸಿದ ಅಪ್ರಾಪ್ತನಿಗೆ ಅಪ್ಲಿಕೇಶನ್​ ಡೌನ್​ ಲೋಡ್ ಮಾಡು ಎಂದು ಹೇಳುವ ಮೂಲಕ ಆನ್​ಲೈನ್​ನಲ್ಲಿ ವಂಚನೆ ಮಾಡಲಾಗಿದೆ.

ಕೊರಾಡಿ ನಿವಾಸಿ ಅಶೋಕ್​ ಮನ್ವಾಟೆ ಎಂಬವರ 15 ವರ್ಷದ ಪುತ್ರ ಬುಧವಾರ ತಮ್ಮ ತಂದೆಯ ಮೊಬೈಲ್​ನಲ್ಲಿ ಅಪರಿಚಿತ ಕರೆ ಸ್ವೀಕರಿಸಿದ್ದಾನೆ. ತನ್ನನ್ನ ಡಿಜಿಟಲ್​ ಪಾವತಿ ಕಂಪನಿಯ ಕಾರ್ಯನಿರ್ವಾಹಕ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿ ನಿಮ್ಮ ತಂದೆಯ ಕ್ರೆಡಿಟ್​ ಮಿತಿ ಹೆಚ್ಚಿಸೋದಾಗಿ ಹೇಳಿದ್ದಾನೆ. ಇದಕ್ಕೆ ಮೊಬೈಲ್​ನಲ್ಲಿ ಸಾಫ್ಟ್​ವೇರ್​ ಅಪ್ಲಿಕೇಶನ್​ ಡೌನ್​ಲೌಡ್​ ಮಾಡಲು ಹೇಳಲಾಗಿದೆ.

ಹುಡುಗ ಅಪ್ಲಿಕೇಶನ್​ ಡೌನ್​ಲೋಡ್ ಮಾಡುತ್ತಿದ್ದಂತೆಯೇ ಅಶೋಕ್​ ಬ್ಯಾಂಕ್​ ಖಾತೆಯಿಂದ 9 ಲಕ್ಷ ರೂಪಾಯಿ ನಾಪತ್ತೆಯಾಗಿದೆ. ಐಪಿಸಿ ಸೆಕ್ಷನ್​ 419 ಅಡಿಯಲ್ಲಿ ಅಶೋಕ್​ ಮನ್ವಾಟೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...