ಅಪರಿಚಿತ ಕರೆ ಮಾಡಿದ ವ್ಯಕ್ತಿಯೊಬ್ಬ ಹೇಳಿದ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ಕೂಡಲೇ ಬ್ಯಾಂಕ್ ಖಾತೆಯಿಂದ 9 ಲಕ್ಷ ರೂಪಾಯಿ ಎಗರಿಸಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಕರೆ ಸ್ವೀಕರಿಸಿದ ಅಪ್ರಾಪ್ತನಿಗೆ ಅಪ್ಲಿಕೇಶನ್ ಡೌನ್ ಲೋಡ್ ಮಾಡು ಎಂದು ಹೇಳುವ ಮೂಲಕ ಆನ್ಲೈನ್ನಲ್ಲಿ ವಂಚನೆ ಮಾಡಲಾಗಿದೆ.
ಕೊರಾಡಿ ನಿವಾಸಿ ಅಶೋಕ್ ಮನ್ವಾಟೆ ಎಂಬವರ 15 ವರ್ಷದ ಪುತ್ರ ಬುಧವಾರ ತಮ್ಮ ತಂದೆಯ ಮೊಬೈಲ್ನಲ್ಲಿ ಅಪರಿಚಿತ ಕರೆ ಸ್ವೀಕರಿಸಿದ್ದಾನೆ. ತನ್ನನ್ನ ಡಿಜಿಟಲ್ ಪಾವತಿ ಕಂಪನಿಯ ಕಾರ್ಯನಿರ್ವಾಹಕ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿ ನಿಮ್ಮ ತಂದೆಯ ಕ್ರೆಡಿಟ್ ಮಿತಿ ಹೆಚ್ಚಿಸೋದಾಗಿ ಹೇಳಿದ್ದಾನೆ. ಇದಕ್ಕೆ ಮೊಬೈಲ್ನಲ್ಲಿ ಸಾಫ್ಟ್ವೇರ್ ಅಪ್ಲಿಕೇಶನ್ ಡೌನ್ಲೌಡ್ ಮಾಡಲು ಹೇಳಲಾಗಿದೆ.
ಹುಡುಗ ಅಪ್ಲಿಕೇಶನ್ ಡೌನ್ಲೋಡ್ ಮಾಡುತ್ತಿದ್ದಂತೆಯೇ ಅಶೋಕ್ ಬ್ಯಾಂಕ್ ಖಾತೆಯಿಂದ 9 ಲಕ್ಷ ರೂಪಾಯಿ ನಾಪತ್ತೆಯಾಗಿದೆ. ಐಪಿಸಿ ಸೆಕ್ಷನ್ 419 ಅಡಿಯಲ್ಲಿ ಅಶೋಕ್ ಮನ್ವಾಟೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ .