
ಒಂದು ವೇಳೆ ಯುಟ್ಯೂಬ್ನಲ್ಲೂ ನಿಮ್ಮ ಗೊಂದಲಕ್ಕೆ ಪರಿಹಾರ ಸಿಕ್ಕಿಲ್ಲ ಅಂದರೆ ಏನು ಮಾಡುತ್ತೀರಿ..? ಕೊನೆಯ ಪ್ರಯತ್ನ ಎಂಬಂತೆ ಸಹಾಯವಾಣಿಗೆ ಕರೆ ಮಾಡಬಹುದು. ಆದರೆ ಎಂದಾದರೂ ನಿಮ್ಮ ಈ ಗೊಂದಲಗಳನ್ನ ಗೂಗಲ್ ಸಿಇಓ ಸುಂದರ್ ಪಿಚ್ಚೈ ಬಳಿ ಪರಿಹರಿಸಿಕೊಳ್ಳಬೇಕು ಎಂದು ಎನಿಸಿದ್ದಿದೆಯೇ..?
ಕೊರೋನಾ ಸಂಕಷ್ಟದ ಹೊತ್ತಲ್ಲೇ ಮತ್ತೊಂದು ಶಾಕ್: ವೈದ್ಯಕೀಯ ಪರಿಕರ ದರ ದಿಢೀರ್ ದುಬಾರಿ
ಟ್ವಿಟರ್ ಬಳಕೆದಾರರೊಬ್ಬರು ಸುಂದರ್ ಪಿಚ್ಚೈ ಬಳಿ ಜಿಮೇಲ್ ಪಾಸ್ವರ್ಡ್ ಹುಡುಕಲು ಸಹಾಯ ಮಾಡುವಂತೆ ಕೋರಿ ಟ್ವೀಟ್ ಮಾಡಿದ್ದಾರೆ..! ಹೆಲ್ಲೋ ಸರ್, ನೀವು ಹೇಗಿದ್ದೀರಿ..? ನಾನು ಜಿಮೇಲ್ ಐಡಿ ಪಾಸ್ವರ್ಡ್ಗಳನ್ನ ಕಳೆದುಕೊಂಡಿದ್ದೇನೆ. ದಯಮಾಡಿ ಪಾಸ್ವರ್ಡ್ ರಿಸೆಟ್ ಮಾಡೋದು ಹೇಗೆ ಎಂದು ಹೇಳಿ. ದಯಮಾಡಿ ಸಹಾಯ ಮಾಡಿ ಎಂದು ಟ್ವೀಟಾಯಿಸಿದ್ದಾರೆ .
ಕೆಲ ದಿನಗಳ ಹಿಂದಷ್ಟೇ ಸುಂದರ್ ಪಿಚ್ಚೈ ಕೋವಿಡ್ 19 ವಿಚಾರವಾಗಿ ಟ್ವೀಟ್ ಮಾಡಿದ್ದರು. ದೇಶದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಗೂಗಲ್ ಹಾಗೂ ಗೂಗಲ್ ಸಿಬ್ಬಂದಿ ಒಂದಾಗಿ 135 ಕೋಟಿ ರೂಪಾಯಿ ದೇಣಿಗೆ ನೀಡಲಿದೆ ಎಂದು ಟ್ವೀಟ್ ಮಾಡಿದ್ದರು. ಈ ಪೋಸ್ಟ್ಗೆ ಸಂಬಂಧಿಸಿ ಮದನ್ ತಮ್ಮ ಜಿಮೇಲ್ ಗೊಂದಲದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಆದರೆ ಗೂಗಲ್ ಸಿಇಒ ಈವರೆಗೂ ಈ ಟ್ವೀಟ್ ನೋಡಿರುವಂತೆ ಕಾಣುತ್ತಿಲ್ಲ. ಸುಂದರ್ ಪಿಚ್ಚೈ ಏನಾದರೂ ಉತ್ತರ ನೀಡಬಹುದೇ ಎಂಬ ಕುತೂಹಲ ಅನೇಕರಲ್ಲಿದೆ.