alex Certify ಮನೆ ಹೊರಗೆ ಅಜ್ಜಿ ಬಳಿ ಮಲಗಿದ್ದ ಮೊಮ್ಮಗಳು, ತಡರಾತ್ರಿ ಮದ್ಯ ಸೇವಿಸಿ ಬಂದವನಿಂದ ನೀಚ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಹೊರಗೆ ಅಜ್ಜಿ ಬಳಿ ಮಲಗಿದ್ದ ಮೊಮ್ಮಗಳು, ತಡರಾತ್ರಿ ಮದ್ಯ ಸೇವಿಸಿ ಬಂದವನಿಂದ ನೀಚ ಕೃತ್ಯ

ನವದೆಹಲಿ: ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಧಾಮ್ ನಬೀ ಕರೀಮ್ ಪ್ರದೇಶದಲ್ಲಿ ನೆಲೆಸಿರುವ ಆರೋಪಿ, ಸದರ್ ಬಜಾರ್ ನಲ್ಲಿ ಗಾಡಿ ಎಳೆಯುವ ಕೆಲಸ ಮಾಡುತ್ತಿದ್ದಾನೆ. ಘಟನೆ ಶುಕ್ರವಾರ ರಾತ್ರಿ ನಡೆದಿದೆ. 8 ವರ್ಷದ ಬಾಲಕಿ ಮನೆಯ ಹೊರೆಗೆ ಅಜ್ಜಿಯೊಂದಿಗೆ ಮಲಗಿದ್ದ ವೇಳೆಯಲ್ಲಿ ಮದ್ಯ ಸೇವನೆ ಮಾಡಿ ಬಂದಿದ್ದ ಆರೋಪಿ ಬಾಲಕಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ಅಜ್ಜಿಗೆ ಎಚ್ಚರವಾದಾಗ ಮೊಮ್ಮಗಳು ಇರಲಿಲ್ಲ. ಮಲಗಿದ್ದ ಕುಟುಂಬ ಸದಸ್ಯರಿಗೆ ಅವರು ವಿಷಯ ತಿಳಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಬಾಲಕಿ ಮರಳಿದ್ದು ಮರುದಿನ ಬೆಳಿಗ್ಗೆ ತೀವ್ರ ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ಕರೆದೊಯ್ದು ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಬಾಲಕಿಗೆ ಮರಾಠಿ ಮಾತ್ರ ಮಾತನಾಡಲು ಬರುತ್ತಿದ್ದು ಆಕೆಯೊಂದಿಗೆ ಮಹಿಳೆಯೊಬ್ಬರಿಂದ ಸಂವಹನ ನಡೆಸಿ ವಿಷಯ ತಿಳಿದುಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಕೇಸು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...