alex Certify ಭಾರತೀಯರ ಮಾಲ್ಡೀವ್ಸ್​ ಎಂಟ್ರಿಗೆ ನಿರ್ಬಂಧ: ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯರ ಮಾಲ್ಡೀವ್ಸ್​ ಎಂಟ್ರಿಗೆ ನಿರ್ಬಂಧ: ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆ..!

ದೇಶದ ಜನತೆ ಸದ್ಯ ಕೊರೊನಾ 2ನೇ ಅಲೆಯ ಹೋರಾಟದಲ್ಲಿದ್ದಾರೆ. ದೇಶದಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋದ್ರ ಹಿನ್ನೆಲೆ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತಕ್ಕೆ ವಿಮಾನಯಾನ ಸೇವೆ ನೀಡಲು ತಾತ್ಕಾಲಿಕ ನಿರ್ಬಂಧ ಹೇರಿವೆ.

ಇದೀಗ ಸುಪ್ರಸಿದ್ಧ ಪ್ರವಾಸಿ ತಾಣ ಮಾಲ್ಡೀವ್ಸ್ ಕೂಡ ಈ ಸಾಲಿಗೆ ಸೇರಿದ್ದು ಭಾರತೀಯರ ಮಾಲ್ಡೀವ್ಸ್ ಎಂಟ್ರಿಗೆ ತಾತ್ಕಾಲಿಕ ನಿರ್ಬಂಧ ಹೇರಿತ್ತು. ಇದೀಗ ದಕ್ಷಿಣ ಏಷ್ಯಾದ ಎಲ್ಲಾ ಪ್ರವಾಸಿಗರಿಗೆ ಮಾಲ್ಡೀವ್ಸ್ ನಿರ್ಬಂಧ ಹೇರಿದೆ.

ಕೆಲ ಸಮಯದಿಂದ ಭಾರತದ ಬಹುತೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್​ಗೆ ಪ್ರವಾಸ ಕೈಗೊಂಡಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಟೂರ್​ನಲ್ಲಿ ಎಂಜಾಯ್​ ಮಾಡಿದ ಫೋಟೋಗಳನ್ನ ಇನ್​ಸ್ಟಾದಲ್ಲಿ ಶೇರ್​ ಮಾಡುತ್ತಿದ್ದರು. ಇದೀಗ ಮಾಲ್ಡೀವ್ಸ್ ಭಾರತೀಯ ಪ್ರವಾಸಕ್ಕೆ ನಿರ್ಬಂಧ ಹೇರುತ್ತಿದ್ದಂತೆಯೆ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೇದಿಕೆಗಳಲ್ಲಿ ಟ್ರೋಲಿಗರು ಭಾರತೀಯ ಸೆಲೆಬ್ರಿಟಿಗಳ ಕಾಲೆಳೆಯುತ್ತಿದ್ದಾರೆ.

— Maldives Immigration (@ImmigrationMV) May 11, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...