alex Certify ದಾರಿ ತಪ್ಪಿದ ಸೊಸೆ: ಮಾವನಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಸೊಸೆ: ಮಾವನಿಂದಲೇ ಘೋರ ಕೃತ್ಯ

ಮುಂಬೈ: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರನ ತಲೆಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಘನ್ಸವಾಂಗಿ ತಹಸೀಲ್ ವ್ಯಾಪ್ತಿಯ ಚಾಪಲ್ ಗಾಂವ್ ಗ್ರಾಮದ ಮಾರಿಯಾ(32) ಹಾಗೂ ಆಕೆಯ ಪ್ರಿಯಕರ ಅರ್ಬಕ್ ಭಾಗವತ್(27) ಕೊಲೆಯಾದವರು ಎಂದು ಗುರುತಿಸಲಾಗಿದೆ. ಮಹಿಳೆಯ ಮಾವ ಬಾತ್ವೆಲ್ ಸಂಪತ್ ಲಾಲ್ಚರೆ ಮತ್ತು ಆತನ ಪುತ್ರ ವಿಕಾಸ್ ಲಾಲ್ಜರೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂಬಾದ್ ಪೊಲೀಸ್ ಇನ್ಸ್ ಪೆಕ್ಟರ್ ಅನಿರುದ್ಧ್ ನಾಂದೇಡ್ಕರ್ ತಿಳಿಸಿರುವ ಮಾಹಿತಿಯಂತೆ, 10 ವರ್ಷದ ಹಿಂದೆ ಮಾರಿಯಾ ಪತಿ ಮೃತಪಟ್ಟಿದ್ದು, ಆಕೆ ವಿವಾಹಿತನಾಗಿದ್ದ ಅರ್ಬಕ್ ಭಾಗವತ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಇದಕ್ಕೆ ಗಂಡನ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹಲವು ಬಾರಿ ಬುದ್ಧಿವಾದ ಹೇಳಿ ಬೆದರಿಸಿದ್ದರು. ಆದರೂ ಅಕ್ರಮ ಸಂಬಂಧ ಮುಂದುವರಿಸಿದ್ದರು.

ಕಳೆದ ಮಾರ್ಚ್ ನಲ್ಲಿ ಮನೆ ಬಿಟ್ಟು ಹೋದ ಜೋಡಿ ಗುಜರಾತ್ನಲ್ಲಿ ನೆಲೆಸಿದ್ದರು. ನಾಪತ್ತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಏಪ್ರಿಲ್ 22ರಂದು ಅವರನ್ನು ಕರೆಸಿಕೊಂಡಿದ್ದಾರೆ. ಗ್ರಾಮದಲ್ಲೇ ಇಬ್ಬರು ಒಟ್ಟಿಗೆ ವಾಸವಾಗಿದ್ದರು. ಅಕ್ಟೋಬರ್ 28ರಂದು ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟ್ರಾಕ್ಟರ್ ಹರಿಸಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...