ಇಬ್ಬರು ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಚಲಿಸುತ್ತಿರುವ ರೈಲಿನಲ್ಲಿ ಹತ್ತಲು ಹೋಗಿ ಫ್ಲಾಟ್ಫಾರ್ಮ್ನಲ್ಲೇ ಬಿದ್ದ 76 ವರ್ಷದ ವೃದ್ಧನ ಜೀವವನ್ನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಥಾಣೆಯ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ 76 ವರ್ಷದ ವೃದ್ಧ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನ್ಸೂರ್ ಅಹಮದ್ ಎಂಬಾತ ರಾತ್ರಿ 8 ಗಂಟೆ ಸುಮಾರಿಗೆ ಚಲಿಸುತ್ತಿರುವ ರೈಲನ್ನ ಹತ್ತೋಕೆ ಮುಂದಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ.
ರೈಲಿಗೆ ಸಿಲುಕಿದ ಬೈಕ್ ಅಪ್ಪಚ್ಚಿ, ಕೂದಲೆಳೆಯಲ್ಲಿ ಪಾರಾದ ಸವಾರ
ವೃದ್ಧ ಚಲಿಸುತ್ತಿರುವ ರೈಲಿಗೆ ತುಂಬಾ ಹತ್ತಿರದಲ್ಲೇ ಬಿದ್ದಿದ್ದ. ಆತ ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಪ್ರಾಣವನ್ನೇ ಕಳೆದುಕೊಳ್ತಿದ್ದ. ಆದರೆ ರೈಲ್ವೆ ರಕ್ಷಣಾ ಪಡೆಯ ಜೀತೇಂದ್ರ ಗುಜಾರ್ ಹಾಗೂ ಎಸ್ಸಿ ಯಾದವ್ ಆತನ ಪ್ರಾಣ ಕಾಪಾಡಿದ್ದಾರೆ.