alex Certify ಕೋವಿಡ್​ನಿಂದ ತಾಯಿ ಕಳೆದುಕೊಂಡ ಕಂದನಿಗೆ ಹರಿದುಬಂತು ವಾತ್ಸಲ್ಯದ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ನಿಂದ ತಾಯಿ ಕಳೆದುಕೊಂಡ ಕಂದನಿಗೆ ಹರಿದುಬಂತು ವಾತ್ಸಲ್ಯದ ಮಹಾಪೂರ

ಕೋವಿಡ್​ 19ನಿಂದ ಬಳಲುತ್ತಿದ್ದ ತಾಯಿ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದು, ಈ ತಾಯಿಯಿಲ್ಲದ ಕಂದಮ್ಮ ಇದೀಗ ಉಳಿದೆಲ್ಲ ತಾಯಿಯರಿಂದ ಆರೈಕೆ ಪಡೆಯುತ್ತಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ 32 ವರ್ಷದ ಬೇಬಿ ಮಿನಾಲ್​​ ವರ್ಣೇಕರ್​ ಎಂಬವರು ಅವಧಿಗೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದರು. ಈಕೆ ಕೋವಿಡ್​ ರೋಗಿಯಾಗಿದ್ದರಿಂದ ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಕೃತಕ ಎದೆಹಾಲಿನಿಂದ ಅಲರ್ಜಿ ಹೊಂದಿದ್ದ ಈ ಮಗುವಿಗೆ ಮಹಾರಾಷ್ಟ್ರದ ಅನೇಕ ತಾಯಂದಿರು ತಮ್ಮ ಎದೆಹಾಲುಣಿಸಿ ಮಗುವಿನ ಜೀವ ಉಳಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಪುಟ್ಟ ಕಂದಮ್ಮ ಇವಾನ್​ ತಂದೆ ಚೇತನ್​, ನನ್ನ ಪತ್ನಿ ಏಪ್ರಿಲ್​ 8ರಂದು ಕೊರೊನಾದಿಂದಾಗಿ ನಿಧನಳಾದಳು. ಇದಾದ ಬಳಿಕ ನನ್ನ ಮಗುವನ್ನ ಉಳಿಸಲು ನಾಗ್ಪುರದ ಅನೇಕ ತಾಯಂದಿರು ಮಾಡಿದ ಸಹಾಯಕ್ಕೆ ಧನ್ಯವಾದ ತಿಳಿಸುವೆ. ನನ್ನ ಮಗು ಕೃತಕ ಹಾಲಿನಿಂದ ಅಲರ್ಜಿ ಹೊಂದಿದ್ದರಿಂದ ಈ ಎಲ್ಲಾ ತಾಯಂದಿರು ಒಂದಾಗಿ ಇವಾನ್​ ಜೀವ ಉಳಿಸಿದ್ದಾರೆ ಎಂದು ಹೇಳಿದ್ರು.

ಇವಾನ್​ನನ್ನ ಮನೆಗೆ ಕರೆದುಕೊಂಡು ಬಂದ ಬಳಿಕವೂ ಚೇತನ್ ಕುಟುಂಬ ತಾಯಿ ಹಾಲಿಗಾಗಿ ಹುಡುಕಾಟ ನಡೆಸಿದೆ. ಈ ವೇಳೆ ಅಧುನಿಕಾ ಪ್ರಕಾಶ್​ ಎಂಬವರು ರಚಿಸಿದ Breastfeeding Support for Indian Women ಎಂಬ ಫೇಸ್​ಬುಕ್​ ಪೇಜ್ ಸಹಾಯ ಮಾಡಿದೆ. ಅಲ್ಲದೇ ಟ್ವಿಟರ್​ನಲ್ಲೂ ಈ ಮಾಹಿತಿಯನ್ನ ಯಾರೋ ಶೇರ್​ ಮಾಡಿದ್ದು ನನ್ನ ಕಂದಮ್ಮಗೆ ಸಹಾಯದ ಮಹಾಪೂರವೇ ಹರಿದುಬರ್ತಿದೆ ಎಂದು ಚೇತನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...