alex Certify ಶಾಕಿಂಗ್​: ಕೇವಲ 5 ರೂ.ಗಾಗಿ ಪುಟ್ಟ ಮಗಳನ್ನೇ ಕೊಂದ ಪಾಪಿ ತಂದೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಕೇವಲ 5 ರೂ.ಗಾಗಿ ಪುಟ್ಟ ಮಗಳನ್ನೇ ಕೊಂದ ಪಾಪಿ ತಂದೆ….!

ಅಳುತ್ತಿದ್ದ 20 ತಿಂಗಳ ಮಗುವನ್ನ ಸುಮ್ಮನಿರಿಸಲು ತಾಯಿ ಪತಿಯ ಬಳಿ ಮಗಳಿಗೆ ತಿಂಡಿ ತರೋಕೆ ಎಂದು 5 ರೂಪಾಯಿ ಕೇಳಿದ್ರೆ ಪಾಪಿ ತಂದೆ ಮಗುವನ್ನೇ ಕೊಲೆ ಮಾಡಿದ ದಾರುಣ ಘಟನೆ ಮಹಾರಾಷ್ಟ್ರದ ಗೋಂದಿಯಾ ಜಿಲ್ಲೆಯಲ್ಲಿ ನಡೆದಿದೆ.

ಲೊನಾರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಆರೋಪಿ 28 ವರ್ಷದ ವಿವೇಕ್​ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. 20 ತಿಂಗಳ ಮಗು ತಿಂಡಿ ಬೇಕು ಎಂದು ಅಮ್ಮನ ಬಳಿ ಹಠ ಹಿಡಿದಿತ್ತು. ಹೀಗಾಗಿ ಅಂಗಡಿ ಹೋಗಿ ತಿಂಡಿ ತರಲು 5 ರೂಪಾಯಿ ಕೊಡಿ ಎಂದು ತಾಯಿ ತನ್ನ ಪತಿ ವಿವೇಕ್​ ಬಳಿ ಕೇಳಿದ್ದಾಳೆ.

ಇದಾದ ಬಳಿಕ ಮಗಳನ್ನ ಎತ್ತಿಕೊಂಡ ವಿವೇಕ್​ ಆಕೆಯ ತಲೆಯನ್ನ ಪದೇ ಪದೇ ಬಾಗಿಲಿಗೆ ಹಾಕಿ ಜಪ್ಪಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮಗಳನ್ನ ಬಚಾವ್​ ಮಾಡೋಕೆ ತಾಯಿ ಮಧ್ಯಪ್ರವೇಶಿಸಿದ್ರೂ ಸಹ ಕೇಳದ ವಿವೇಕ್​ ಕೈಯಾರೇ ತನ್ನ ಮಗಳನ್ನ ಸಾಯಿಸಿದ್ದಾನೆ. ತಲೆ ಹಾಗೂ ಇತರೆ ಭಾಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಗು ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದೆ.

ಹೊಸ ಮನೆಗೆ ಬಂದ ಕೂಡಲೇ ಈತನಿಗೆ ಸಿಕ್ಕಿದ್ದು ಆಂಟಿಕ್ ನಿಧಿ

ಮಗುವಿನ ತಾಯಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಮೃತ ಬಾಲಕಿಯ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆರೋಪಿ ವಿವೇಕ್​ ವಿರುದ್ಧ ಕೊಲೆ ಕೇಸ್​ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...