ಆಂಧ್ರ ಪ್ರದೇಶದ ಶ್ರೀಕಕುಲಂ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಸಾಗಿಸಲು ಹೆಗಲು ನೀಡಿದ್ದು ಮಾತ್ರವಲ್ಲದೇ ಆತನ ಅಂತ್ಯಕ್ರಿಯೆಗೂ ನೆರವಾದ ಮಹಿಳಾ ಸಬ್ ಇನ್ಸ್ಪೆಕ್ಟರ್ ಕರ್ತವ್ಯ ನಿಷ್ಟೆಗೆ ಆಂಧ್ರಪ್ರದೇಶ ಡಿಜಿಪಿ ಗೌತಮ್ ಸಾವಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಸಿಬುಗ್ಗಾ ಠಾಣೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಆಗಿರುವ ಸಿರಿಶಾ, ಅಡಿವಿಕೊಟ್ಟೂರು ಗ್ರಾಮದಲ್ಲಿ ಸಿಕ್ಕಿದ್ದ ಅಪರಿಚಿತ ಶವವನ್ನ ಬರೋಬ್ಬರಿ 2 ಕಿಲೋಮೀಟರ್ ದೂರದವರೆಗೆ ಸಾಗಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಸುದ್ದಿ ಮಾಡಿದೆ.
ಮಹಿಳಾ ಅಧಿಕಾರಿ ಶವಕ್ಕೆ ಹೆಗಲು ಕೊಟ್ಟ ವೇಳೆ ಅಲ್ಲೇ ಇದ್ದ ಸ್ಥಳೀಯರು ನೀವು ಶವ ಸಾಗಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಆದರೂ ಆಕೆ ಗ್ರಾಮಸ್ಥರಿಗೆ ಶವವನ್ನ ಸಾಗಿಸಲು ನೆರವಾಗಿದ್ದಾರೆ.