alex Certify ಲೈಂಗಿಕ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್ ನ್ಯೂಸ್

ಮುಂಬೈ: ಕೋವಿಡ್ ನಿಂದ ತೊಂದರೆಗೀಡಾಗಿರುವ ಸೆಕ್ಸ್ ವರ್ಕರ್ ಗಳಿಗೆ ಮಹಾರಾಷ್ಟ್ರ ಸರ್ಕಾರ ಕೊಡುಗೆ ನೀಡಲು ಮುಂದಾಗಿದೆ. ಮೂರು ತಿಂಗಳು ಮಾಸಾಶನ ನೀಡುವುದಾಗಿ ಘೋಷಿಸಿದೆ.

ರಾಜ್ಯದ 32 ಜಿಲ್ಲೆಗಳ 30 ಸಾವಿರ ಮಹಿಳೆಯರಿಗೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿಗೆ ಅನ್ವಯವಾಗುವಂತೆ ತಲಾ 5 ಸಾವಿರ ನೀಡುವುದಾಗಿ ತಿಳಿಸಿದೆ. ಶಾಲೆಗೆ ಹೋಗುವ ಮಕ್ಕಳಿದ್ದವರಿಗೆ ಇನ್ನೂ 2,500 ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಿದೆ. ಇದಕ್ಕಾಗಿ ಸರ್ಕಾರ 51 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ.

ಸುಪ್ರೀಂ ಕೋರ್ಟ್ ಸೂಚನೆಯಂತೆ ಕೋವಿಡ್ 19 ಪರಿಹಾರವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 30,901 ಮಹಿಳೆಯರಿಗೆ ಪರಿಹಾರಧನ ನೀಡಲು ಸರ್ಕಾರ ಗುರುವಾರ ನಿರ್ಣಯ ಕೈಗೊಂಡಿದೆ. ಗುರುತಿನ ಚೀಟಿ ಪಡೆದು ಪರಿಹಾರ ವಿತರಣೆಗೆ ವ್ಯವಸ್ಥೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಶೋಮತಿ ಠಾಕೂರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...